ದಾಸೋಹ ದಿನ ಜನರ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿರಬೇಕು: ಶ್ರೀ ಸಿದ್ಧಲಿಂಗ ಶ್ರೀ - ತುಮಕೂರು ದಾಸೋಹ ದಿನ ಆಚರಣೆ
ತುಮಕೂರು: ಶಿವಕುಮಾರ ಸ್ವಾಮೀಜಿ ಅವರ ಮೂರನೇ ಪುಣ್ಯಸ್ಮರಣೆಯ ದಿನವನ್ನು ಸರ್ಕಾರ, ದಾಸೋಹ ದಿನವೆಂದು ಪರಿಗಣಿಸಿ ಸಾಂಕೇತಿಕವಾಗಿ ಚಾಲನೆ ನೀಡಿದೆ. ಶಿವಕುಮಾರ ಸ್ವಾಮೀಜಿ ಅವರ ದಾಸೋಹ ಪರಿಕಲ್ಪನೆಯನ್ನು ಸರ್ಕಾರ ದಾಸೋಹ ದಿನವನ್ನಾಗಿ ಘೋಷಣೆ ಮಾಡಿದೆ. ಅದು ಕೇವಲ ಅನ್ನ ದಾಸೋಹಕ್ಕೆ ಮಾತ್ರ ಸೀಮಿತವಾಗಿರಬಾರದು. ಬದಲಾಗಿ, ಜನರ ಸರ್ವತೋಮುಖ ಅಭಿವೃದ್ಧಿ ದೃಷ್ಟಿಕೋನದಿಂದ ಮುಂದೆ ಸಾಗಬೇಕಿದೆ ಎಂದು ಈಟಿವಿ ಭಾರತ ಜೊತೆ ಮಾತನಾಡಿದ ಸಿದ್ದಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ತಿಳಿಸಿದರು.