ರಾವಣನ ದಹನದ ಮೂಲಕ ಶ್ರೀರಾಮೋತ್ಸವ ಕಾರ್ಯಕ್ರಮಕ್ಕೆ ಅದ್ಧೂರಿ ತೆರೆ - undefined
ಮಂಗಳೂರು: ವಿಶ್ವ ಹಿಂದೂ ಪರಿಷತ್, ಭಜರಂಗ ದಳ, ಮಾತೃ ವಾಹಿನಿ ಹಾಗೂ ದುರ್ಗಾ ವಾಹಿನಿ ನೇತೃತ್ವದಲ್ಲಿ ನಗರದ ನೆಹರೂ ಮೈದಾನದಲ್ಲಿ 17ನೇ ವರ್ಷದ ಶ್ರೀರಾಮೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ರಾವಣ ದಹನ ಕೂಡ ನಡೆಯಿತು. ಚಂಡೆ, ವಾದ್ಯ, ಹುಲಿವೇಷ ಕುಣಿತದೊಂದಿಗೆ ರಾವಣ ಪ್ರತಿಕೃತಿ ಕರೆ ತಂದು ಬೃಹತ್ ಗಾತ್ರದ ರಾವಣನ ಪ್ರತಿಕೃತಿಗೆ ರಾಮನ ವೇಷಧಾರಿ ಬಾಣ ಹೂಡಿ ದಹನ ಪ್ರಕ್ರಿಯೆ ನೆರವೇರಿಸಿದರು. ಬಳಿಕ ಆಕರ್ಷಕ ಸಿಡಿಮದ್ದಿನ ಪ್ರದರ್ಶನದೊಂದಿಗೆ ಮೂರು ದಿನಗಳ ಕಾಲ ನಡೆದ ಶ್ರೀ ರಾಮೋತ್ಸವಕ್ಕೆ ಅದ್ಧೂರಿಯಾಗಿ ತೆರೆ ಎಳೆಯಲಾಯಿತು.