ಗವಿಮಠದಲ್ಲಿ ಶ್ರೀ ಶಿವಶಾಂತವೀರ ಶರಣರಿಂದ ದೀರ್ಘದಂಡ ನಮಸ್ಕಾರ - Koppal
ಕೊಪ್ಪಳ: ಶ್ರೀ ಗವಿಸಿದ್ದೇಶ್ವರ ಜಾತ್ರೆಯ ಹಿನ್ನೆಲೆಯಲ್ಲಿ ಪ್ರತೀ ವರ್ಷದಂತೆ ಈ ವರ್ಷವೂ ಸಹ ಚಿಕ್ಕೇನಕೊಪ್ಪ-ಬಳಗಾನೂರಿನ ಶ್ರೀ ಶಿವಶಾಂತವೀರ ಶರಣರು ಗವಿಮಠದಲ್ಲಿ ದೀರ್ಘದಂಡ ನಮಸ್ಕಾರ ಹಾಕಿದರು. ರಥೋತ್ಸವದ ಮರುದಿನದಂದು ಶರಣರು ಗವಿಮಠದಲ್ಲಿ ದೀರ್ಘದಂಡ ನಮಸ್ಕಾರ ಹಾಕುತ್ತಾರೆ. ಪ್ರತೀ ವರ್ಷ ಸಂಜೆ 4 ಗಂಟೆಯ ವೇಳೆಗೆ ಶರಣರ ದೀರ್ಘದಂಡ ನಮಸ್ಕಾರ ಕಾರ್ಯಕ್ರಮವಿರುತ್ತಿತ್ತು. ಆದರೆ ಈ ಬಾರಿ ಬೆಳಗಿನ ವೇಳೆಯಲ್ಲಿ ಶರಣರು ಹೂವಿನ ಹಾಸಿಗೆಯ ಮೇಲೆ ಮಠದ ಮುಖ್ಯ ದ್ವಾರದಿಂದ ದೀರ್ಘದಂಡ ನಮಸ್ಕಾರ ಹಾಕಿದರು. "ಪಾಹಿಮಾಂ ಗವಿಯ ಸಿದ್ಧ, ಗವಿಯ ಸಿದ್ಧ ಪಾಹಿಮಾಂ" ಎಂಬ ನಾಮಸ್ಮರಣೆಯೊಂದಿಗೆ ಶಿವಶಾಂತವೀರ ಶರಣರು ದೀರ್ಘದಂಡ ನಮಸ್ಕಾರ ಹಾಕಿದರು. ಕೊರೊನಾ ಭೀತಿ ಹಿನ್ನೆಲೆಯಲ್ಲಿ ಸರಳವಾಗಿ ಜಾತ್ರೆ ಆಚರಣೆ ಮಾಡಲಾಗುತ್ತಿದ್ದು, ಶರಣರ ಹಿಂದೆ ಭಕ್ತರು ದೀರ್ಘದಂಡ ನಮಸ್ಕಾರ ಹಾಕುವುದಕ್ಕೆ ಈ ಬಾರಿ ನಿರ್ಬಂಧಿಸಲಾಗಿತ್ತು.