ಎಚ್.ವಿಶ್ವನಾಥ್ ಪರ ಅಬ್ಬರದ ಪ್ರಚಾರ ನಡೆಸಿದ ಶ್ರೀರಾಮುಲು - ಎಚ್.ವಿಶ್ವನಾಥ್ ಪರ ಪ್ರಚಾರ ಮಾಡಿದ ಶ್ರೀರಾಮುಲು ಲೆಟೆಸ್ಟ್ ನ್ಯೂಸ್
ಮೈಸೂರು: ಹುಣಸೂರು ತಾಲೂಕಿನ ವಿಧಾನಸಭಾ ಬಿಜೆಪಿ ಅಭ್ಯರ್ಥಿ ಎಚ್.ವಿಶ್ವನಾಥ್ ಪರ ಸಚಿವ ಶ್ರೀರಾಮುಲು ಮೂರನೇ ಸುತ್ತಿನ ಅಬ್ಬರದ ಪ್ರಚಾರಕ್ಕಿಳಿದಿದ್ದಾರೆ. ಹುಣಸೂರು ಬಿಳಿಕೆರೆ ಗ್ರಾಮ, ಸಬ್ಬನಹಳ್ಳಿ, ಹಳೇಬಿಡು,ಗೆರಸನಹಳ್ಳಿ,ಆಯರಹಳ್ಳಿ ಕೆಂಪನಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಶ್ರೀರಾಮುಲು ಅವರು ಅಭ್ಯರ್ಥಿ ಪರವಾಗಿ ಅಬ್ಬರದ ಪ್ರಚಾರ ನಡೆಸಿದರು. ಪ್ರಚಾರ ಮೆರವಣಿಗೆಯಲ್ಲಿ ಮಾತನಾಡಿದ ಶ್ರೀರಾಮುಲು, ಜೆಡಿಎಸ್ ಹಾಗೂ ಕಾಂಗ್ರೆಸ್ ಒಳ ಒಪ್ಪಂದ ಮಾಡಿಕೊಂಡಿವೆ. ಕಾಂಗ್ರೆಸ್ ಸ್ಟ್ರಾಂಗ್ ಇರುವ ಕಡೆ ಜೆಡಿಎಸ್ ಡಮ್ಮಿ ಕ್ಯಾಂಡಿಡೇಟ್ ಹಾಗೂ ಜೆಡಿಎಸ್ ಸ್ಟ್ರಾಂಗ್ ಇರುವ ಕಡೆ ಕಾಂಗ್ರೆಸ್ ಡಮ್ಮಿ ಕ್ಯಾಂಡಿಡೇಟ್ ಹಾಕಿದೆ. ಈ ಮೂಲಕ ಒಳ ಒಪ್ಪಂದ ಮಾಡಿಕೊಂಡಿವೆ ಎಂದು ಆರೋಪಿಸಿದರು.