ಯುವಕರು ದೃಢ ಸಂಕಲ್ಪದ ಮನೋಭಾವ ಹೊಂದಿದ್ದರೆ ಸಾಧನೆ ಸಲೀಸು: ಡಾ.ವೀಣಾ ಬನ್ನಂಜೆ - ಕರ್ನಾಟಕ ವೈಭವ ವೈಚಾರಿಕತೆಯ ಯುವಗೋಷ್ಠಿ
ರಾಣೆಬೆನ್ನೂರು: 70 ರ ವಯಸ್ಸಿನ ರಮಣ, ಪರಮಹಂಸರರು ವಿವೇಕಾನಂದರಿಗೆ ಪ್ರೇರಕರಾದರು. ಇದೇ ರೀತಿಯ ಪ್ರೇರಣೆ ಶಕ್ತಿಯನ್ನು ಇಂದಿನ ಯುವಕರು ಪಡೆಯಬೇಕಾಗಿದೆ. ಯುವಕರು ಆತ್ಮಸ್ಥೈರ್ಯ, ಒಳ್ಳೆಯ ನಿರ್ಧಾರ, ದೃಢ ಸಂಕಲ್ಪದ ಮನೋಭಾವ ಹೊಂದಿದ್ದರೆ ಏನಾದರೂ ಸಾಧಿಸಬಹುದು ಎಂದು ಎಂದು ಆಧ್ಯಾತ್ಮಿಕ ಚಿಂತಕಿ ಡಾ. ವೀಣಾ ಬನ್ನಂಜೆ ಸಲಹೆ ನೀಡಿದರು. ನಗರದಲ್ಲಿ ಆಯೋಜಿಸಲಾದ ಕರ್ನಾಟಕ ವೈಭವ ವೈಚಾರಿಕತೆಯ ಯುವಗೋಷ್ಠಿಯಲ್ಲಿ ಅವರು ಪಾಲ್ಗೊಂಡಿದ್ದರು.