ಕಾರ್ತಿಕ ಮಾಸದ ಐತಿಹಾಸಿಕ ಬಸವನಗುಡಿ ಕಡಲೆಕಾಯಿ ಪರಿಷೆಗೆ ವಿದ್ಯುಕ್ತ ಚಾಲನೆ - ಬೆಂಗಳೂರಿನ ಸಾಂಸ್ಕೃತಿಕ ಹಬ್ಬ
ಬೆಂಗಳೂರಿನ ಸಾಂಸ್ಕೃತಿಕ ಹಬ್ಬವೆಂದೇ ಪ್ರಸಿದ್ಧಿ ಪಡೆದಿರುವ ಬಸವನಗುಡಿ ಕಡಲೆಕಾಯಿ ಪರಿಷೆಗೆ, ಇಲ್ಲಿನ ದೊಡ್ಡ ಗಣಪತಿಗೆ ಕಡಲೆಕಾಯಿಯ ಅಭಿಷೇಕ ಮಾಡುವ ಮೂಲಕ ಚಾಲನೆ ದೊರೆತಿದೆ. ಇಂದಿನಿಂದ ಆರಂಭವಾಗಲಿರುವ ಪರಿಷೆಗೆ ಬೆಳಗ್ಗೆ 8.30ರ ಶುಭ ಲಗ್ನದಲ್ಲಿ ಗಣಪನಿಗೆ ಪೂಜೆ ಆರಂಭವಾಗಿದ್ದು, ಮೊದಲಿಗೆ ಪಂಚಾಮೃತ ಅಭಿಷೇಕ, ನಂತರ ಗಣಪನಿಗೆ ಕಡಲೆಕಾಯಿ ಅಭಿಷೇಕ, ದೊಡ್ಡ ಬಸವನಿಗೆ ಕಡಲೆಕಾಯಿ ಅಭಿಷೇಕ ಮಾಡಲಾಗಿದೆ.ಗಣಪನ ಕಡಲೆಕಾಯಿ ಪೂಜೆ ಕಣ್ತುಂಬಿಕೊಳ್ಳಲು ಭಕ್ತರ ದಂಡೇ ನೆರೆದಿದೆ.