ಹಾವೇರಿಯಲ್ಲಿ ಶ್ರಾವಣ ಮಾಸ ಸಂಭ್ರಮ... ಸಂಕಷ್ಟಿ ಪ್ರಯುಕ್ತ ವಿನಾಯಕನಿಗೆ ಪೂಜೆ - ವಿಘ್ನೇಶ್ವರನಿಗೆ ಬೆಣ್ಣಿಯಿಂದ ಅಲಂಕಾರ
ಹಾವೇರಿ ಜಿಲ್ಲೆಯಾದ್ಯಂತ ಶ್ರಾವಣ ಮಾಸವನ್ನ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಶ್ರಾವಣ ಮಾಸದಲ್ಲಿ ಒಂದೇ ಒಂದು ಸಂಕಷ್ಟಿ ಬರುವ ಹಿನ್ನೆಲೆಯಲ್ಲಿ ಇಂದು ವರಸಿದ್ಧಿ ವಿನಾಯಕನ ದೇವಸ್ಥಾನದಲ್ಲಿ ವಿಶೇಷ ಅಲಂಕಾರ ಮತ್ತು ಪೂಜೆ ಮಾಡಲಾಯಿತು. ವಿಘ್ನ ವಿನಾಶಕನಿಗೆ ಬೆಣ್ಣಿಯಿಂದ ಅಲಂಕಾರ ಮಾಡಲಾಗಿದ್ದು, ಸುಮಾರು 5 ಕೆಜಿ ಬೆಣ್ಣೆಯನ್ನು ಈ ಅಲಂಕಾರಕ್ಕೆ ಬಳಸಲಾಗಿದೆ.