ಗಣಿನಾಡಿನ ಮನೆ ಮನೆಗೆ ತೆರಳಿ ರಾಖಿ ಕಟ್ಟಿದ ಈಶ್ವರಿ ವಿದ್ಯಾಲಯದ ಸಹೋದರಿಯರು! - Special Rakhi Campaign of Ishwari Vidyalaya Sisters!
ರಕ್ಷಾ ಬಂಧನದ ನಿಮಿತ್ತ ಗಣಿನಗರಿ ಬಳ್ಳಾರಿಯಲ್ಲಿ ಈಶ್ವರಿ ವಿದ್ಯಾಲಯದ ಸಹೋದರಿಯರು ರಾಖಿ ಅಭಿಯಾನ ನಡೆಸಿದರು. ಈಶ್ವರಿ ವಿದ್ಯಾಲಯದ ಸಹೋದರಿ ಬಿ.ಕೆ.ನಿರ್ಮಲಾ ಅವರ ನೇತೃತ್ವದಲ್ಲಿ ನಿನ್ನೆ ಬೆಳಿಗ್ಗೆಯಿಂದಲೇ ನಾನಾ ಸರ್ಕಾರಿ ಇಲಾಖೆಗಳ ಕಚೇರಿ ಹಾಗೂ ಸಂಸದರ ಕಚೇರಿ ಮತ್ತು ಶಾಸಕರ ಮನೆ ಮನೆಗೆ ತೆರಳಿ ರಾಖಿ ಕಟ್ಟುವ ಮುಖೇನ ರಕ್ಷಾಬಂಧನ ಹಬ್ಬವನ್ನು ವಿಶಿಷ್ಟ ರೀತಿಯಾಗಿ ಆಚರಿಸಿದರು.