ಸಿದ್ದಗಂಗಾಮಠದಲ್ಲಿ ಬಸವಜಯ ಮೃತ್ಯುಂಜಯ ಸ್ವಾಮೀಜಿಯಿಂದ ವಿಶೇಷ ಪೂಜೆ - Basavajaya Mritunjaya Swamiji at Siddhagangamatha
ತುಮಕೂರು: ಮಾರ್ಚ್ 23ರಿಂದ ಬೆಂಗಳೂರಿನ ಟೌನ್ ಹಾಲ್ನ ರಾಣಿ ಚೆನ್ನಮ್ಮ ಪ್ರತಿಮೆ ಬಳಿಯಿಂದ ಆರಂಭಗೊಂಡಿರೋ ಶರಣಾರ್ಥಿ ಸಂದೇಶ ಜಾಥಾ ಯಶಸ್ವಿಯಾಗಲಿ ಎಂದು ಆಶಿಸಿ ತುಮಕೂರಿನ ಸಿದ್ದಗಂಗಾ ಮಠದಲ್ಲಿ ಬಸವ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಇದೇ ವೇಳೆ ಶ್ರೀ ಶಿವಕುಮಾರ ಸ್ವಾಮೀಜಿ ಗದ್ದುಗೆಗೆ ಪೂಜೆ ಸಲ್ಲಿಸಲಾಯಿತು. ಏಪ್ರಿಲ್ 11ಕ್ಕೆ ಜಾಥಾವು ಬಾಗಲಕೋಟೆ ತಲುಪಲಿದೆ. ಈ ಸಂದರ್ಭದಲ್ಲಿ ಮಾಜಿ ಸಚಿವ ಬಸವರಾಜ ಪಾಟೀಲ್ ಯತ್ನಾಳ್, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಹಾಜರಿದ್ದರು.