ಮದುವಣಗಿತ್ತಿಯಂತೆ ಶೃಂಗಾರಗೊಂಡ ವಿಶೇಷ ಸಖಿ ಮತಗಟ್ಟೆ - undefined
ವಿಜಯಪುರ ನಗರದ ದರ್ಬಾ ಹೈಸ್ಕೂಲ್ನಲ್ಲಿ ಮತಗಟ್ಟೆಗೆ ಬಂದು ಮತದಾರರು ಮತ ಚಲಾಯಿಸುತ್ತಿದ್ದಾರೆ. ದರ್ಬಾರ್ ಹೈಸ್ಕೂಲ್ನಲ್ಲಿ ವಿಷೇಶವಾಗಿ ಎರಡು ಪ್ರಮುಖ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಒಂದು ಮಾದರಿ ಮತಗಟ್ಟೆ ಹಾಗೂ ಇನ್ನೊಂದು ಸಖಿ ಮತಗಟ್ಟೆ. ಇನ್ನು ಮಹಿಳೆಯರಿಗೆ ವಿಷೇಶವಾಗಿ ರಚಿಸಲ್ಪಟ್ಟಿರುವ ಸಖಿ ಮತಗಟ್ಟೆ 166ರಲ್ಲಿ ಮಹಿಳಾಮಣಿಗಳು ತಮ್ಮ ಮತವನ್ನು ಚಲಾಯಿಸುತ್ತಿದ್ದಾರೆ. ಈ ಮತಗಟ್ಟೆಯನ್ನು ಮಹಿಳೆಯರಿಗೆ ಆಕರ್ಷಿಸುವ ರೀತಿಯಲ್ಲಿ ರಚಿಸಲಾಗಿದೆ. ಬಲೂನ್ ಹಾಗೂ ರಂಗೋಲಿ ಹಾಕುವ ಮೂಲಕ ಸಖಿ ಮತಗಟ್ಟೆಯನ್ನು ಶೃಂಗಾರ ಮಾಡಲಾಗಿದ್ದು, ಮಹಿಳಾಮಣಿಗಳಿಗೆ ಸ್ವಾಗತಿಸುವಂತಿದೆ.