ಹೊಸ ವರ್ಷದ ಸಂಭ್ರಮ.. ಧರ್ಮಸ್ಥಳ ದೇಗುಲಕ್ಕೆ ಹೂ, ಹಣ್ಣು, ತರಕಾರಿಗಳಿಂದ ವಿಶೇಷ ಸಿಂಗಾರ! - Dharmasthala Temple Decorated by flowers
ಹೊಸ ವರ್ಷದ ಅಂಗವಾಗಿ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ದೇಗುಲವನ್ನು ವಿಶೇಷವಾಗಿ ಅಲಂಕರಿಸಲಾಗಿದೆ. ನಾಡಿನೆಲ್ಲೆಡೆಯಿಂದ ದೇವಸ್ಥಾನಕ್ಕೆ ಅಧಿಕ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ. ದೇವಾಲಯದ ಮುಂಭಾಗದಲ್ಲಿ ಶಿವ, ಪಾರ್ವತಿಯ ಬಿಂಬ ಕಾಣುವಂತೆ ಇಡಲಾಗಿದೆ. ದೇವಸ್ಥಾನ ಆವರಣ, ಹೆಗ್ಗಡೆಯವರ ನಿವಾಸ “ಬೀಡು” ಹಾಗೂ ಇತರ ಕಟ್ಟಡಗಳನ್ನು ಹೂ, ಹಣ್ಣು, ಅಡಿಕೆ, ಬಾಳೆ, ಜೋಳ, ಎಲೆ ಇತ್ಯಾದಿ ಪ್ರಾಕೃತಿಕ ಪರಿಕರಗಳಿಂದ ಆಕರ್ಷಕ ವಿನ್ಯಾಸದಲ್ಲಿ ಸಿಂಗರಿಸಲಾಗಿದೆ. ಈ ವಿನ್ಯಾಸಗಳು ಭಕ್ತರನ್ನು ವಿಶೇಷವಾಗಿ ಆಕರ್ಷಿಸುತ್ತಿವೆ.