ಡೊಳ್ಳು ಕುಣಿತದವರೊಂದಿಗೆ ಸ್ಪೀಕರ್ ಕಾಗೇರಿ ಗಿಲಿಗಚ್ಚಿ ಹಿಡಿದು ಸ್ಟೆಪ್... ವಿಡಿಯೋ - ಡೊಳ್ಳು ಕುಣಿತದವರೊಂದಿಗೆ ಸ್ಪೀಕರ್ ಕಾಗೇರಿ ಡ್ಯಾನ್ಸ್
ಶಿರಸಿ ತಾಲೂಕಿನ ಬರೂರಿನ ಶ್ರೀ ಲಕ್ಷ್ಮೀ ನರಸಿಂಹ ದೇವರ ನೂತನ ವಿಗ್ರಹ ಪ್ರತಿಷ್ಠಾಪನೆ ಕಾರ್ಯಕ್ರಮದ ವೇಳೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಡೊಳ್ಳು ಕುಣಿತದ ತಂಡದವರೊಂದಿಗೆ ಹೆಜ್ಜೆ ಹಾಕಿ ಗಿಲಿಗಚ್ಚಿಯನ್ನು ಬಾರಿಸಿದ್ದು, ಎಲ್ಲರ ಗಮನ ಸೆಳೆಯಿತು. ಕಳೆದ 9 ತಿಂಗಳಲ್ಲಿ ನಿರ್ಮಾಣವಾಗಿರುವ ನೂತನ ದೇವಾಲಯದಲ್ಲಿ ಲಕ್ಷ್ಮೀ ನರಸಿಂಹ ದೇವರ ನೂತನ ವಿಗ್ರಹವನ್ನು ವೈದಿಕ ಪ್ರಮುಖರ ನೇತೃತ್ವದಲ್ಲಿ ನೂರಾರು ಭಕ್ತರ ಸಮ್ಮುಖದಲ್ಲಿ ವಿಗ್ರಹ ಪ್ರತಿಷ್ಠಾಪನೆ ಮಾಡಲಾಯಿತು. ನೂತನ ವಿಗ್ರಹವನ್ನು ಅಲಂಕರಿಸಿ, ಆರತಿಯೊಂದಿಗೆ ಸಲ್ಲಿಸಲಾಯಿತು. ನಂತರ ದೇವರ ದರ್ಶನಕ್ಕೆ ಭಕ್ತರಿಗೆ ಅವಕಾಶ ಮಾಡಿಕೊಡಲಾಯಿತು. ಈ ಮೊದಲು ಬರೂರಿನ ವಿಶೇಷ ಕಲೆಯಾದ ಸಾಂಪ್ರದಾಯಿಕ ಡೊಳ್ಳು ಕುಣಿತವನ್ನು ಪ್ರದರ್ಶನ ಮಾಡಲಾಯಿತು. ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಡೊಳ್ಳು ಕುಣಿತದ ತಂಡದವರೊಂದಿಗೆ ಹೆಜ್ಜೆ ಹಾಕಿ, ಗಿಲಿಗಚ್ಚಿಯನ್ನು ಬಾರಿಸಿ ಸಂಭ್ರಮಿಸಿದರು. ಇದೀಗ ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸ್ಪೀಕರ್ ಕಾಗೇರಿ ಅವರ ಸರಳತೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.