14 ಶಾಸಕರನ್ನು ಅನರ್ಹಗೊಳಿಸಿ ಸ್ಪೀಕರ್ ತೀರ್ಪು: ಕೈ-ತೆನೆ ಖುಷ್, ಬಿಜೆಪಿ ಕಿಡಿ - ಸ್ಪೀಕರ್ ರಮೇಶ್ ಕುಮಾರ್
ಕಳೆದ ಗುರುವಾರವಷ್ಟೇ ಪಕ್ಷಾಂತರ ನಿಷೇಧ ಕಾಯ್ದೆಯಡಿ ಮೂವರು ಶಾಸಕರನ್ನು ಸ್ಪೀಕರ್ ರಮೇಶ್ ಕುಮಾರ್ ಅನರ್ಹಗೊಳಿಸಿದ್ದರು. ಇದು ಇನ್ನುಳಿದ ರೆಬೆಲ್‌ಗಳಿಗೆ ಎಚ್ಚರಿಕೆಯ ಗಂಟೆ ಅಂತಲೇ ಹೇಳಲಾಗುತ್ತಿತ್ತು. ಆದ್ರೆ ಮುಂಬೈನಲ್ಲಿರುವ ಶಾಸಕರು ಮಾತ್ರ ಇದು ನಮ್ಮನ್ನ ಬೆದರಿಸುವ ತಂತ್ರ, ಯಾವುದೇ ಕಾರಣಕ್ಕೂ ಪಕ್ಷಕ್ಕೆ ವಾಪಸ್ ಬರಲ್ಲ ಅಂತಿದ್ರು. ಇವತ್ತು ಆ 14 ಶಾಸಕರಿಗೂ ಸ್ಪೀಕರ್ ರಮೇಶ್ ಕುಮಾರ್ ಬಿಗ್ ಶಾಕ್ ಕೊಟ್ಟಿದ್ದಾರೆ. ಇನ್ನು ಸ್ಪೀಕರ್ ಅವರ ಈ ತೀರ್ಪನ್ನು ಕೈ-ತನೆ ಮುಖಂಡರು ಸ್ವಾಗತಿಸಿದ್ರೆ, ಬಿಜೆಪಿ ಮುಖಂಡರು ಕಿಡಿಕಾರಿದ್ದಾರೆ.