ಆರೋಗ್ಯಧಿಕಾರಿ ಮಂಜುನಾಥ್ ಸಿಕ್ಕ ಬಳಿಕವೇ ನಾಪತ್ತೆ ಕೇಸ್ಗೆ ಮುಕ್ತಿ ಸಿಗಲಿದೆ: ಚನ್ನಣ್ಣನವರ್ - Hosakote THO Missing News
ಹೊಸಕೋಟೆ: ಇದೇ ತಿಂಗಳ 15ರ ಸಂಜೆಯಿಂದ ಹೊಸಕೋಟೆ ತಾಲೂಕು ಆರೋಗ್ಯಧಿಕಾರಿ ಮಂಜುನಾಥ್ ಅವರ ಮೊಬೈಲ್ ಸ್ವೀಚ್ ಆಫ್ ಆಗಿದೆ. ಅವರ ಸಂಬಂಧಿ ನಾಗೇಶ್ ಎನ್ನುವವರು ನಾಪತ್ತೆಯಾದ ಬಗ್ಗೆ ದೂರು ನೀಡಿದ್ದಾರೆ. ದೂರಿನನ್ವಯ ಅವರನ್ನು ಪತ್ತೆ ಹಚ್ಚಲು 10 ತಂಡಗಳನ್ನು ರಚನೆ ಮಾಡಲಾಗಿದೆ. ಕ್ಲಿನಿಕ್ಗಳ ದಾಳಿ ಸಂಬಂಧ ಇವರಿಗೆ ಬೆದರಿಕೆ ಹಾಕಿದ್ದ ಎನ್ನಲಾದ ಜಯರಾಜ್ ಎನ್ನುವವರನ್ನು ವಿಚಾರಣೆಗೊಳಪಡಿಸಲಾಗಿದೆ. ಇಂದು ಬೆಳಗ್ಗೆ ಚನ್ನಪಟ್ಟಣದಲ್ಲಿ ಅವರ ಮೊಬೈಲ್ ಆನ್ ಆಗಿದೆ. ಹೀಗಾಗಿ ಅವರು ಸಿಕ್ಕ ನಂತರ ಇನ್ನಷ್ಟು ಮಾಹಿತಿಗಳು ಹೊರ ಬರಲಿವೆ ಎಂದು ಎಸ್ಪಿ ರವಿ ಡಿ. ಚನ್ನಣ್ಣನವರ್ ಹೊಸಕೋಟೆಯಲ್ಲಿ ಪ್ರತಿಕ್ರಿಯೆ ನೀಡಿದರು.