ವೃತ್ತಿಯಲ್ಲಿ ಎಸ್ಪಿಯಾದ್ರು ಪ್ರವೃತ್ತಿ ಗಾಯಕರಂತೆ ಹಾಡಿದ ಸಿ.ಬಿ ವೇದಮೂರ್ತಿ - ರಾಯಚೂರು ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಸಿ.ಬಿ ವೇದಮೂರ್ತಿ ಹಾಡು
ರಾಯಚೂರು ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಸಿ.ಬಿ ವೇದಮೂರ್ತಿ ಹಾಡು ಹೇಳುವ ಮೂಲಕ ವಿಶೇಷ ಗಮನ ಸೆಳೆದರು. ನಗರದ ರಂಗಮಂದಿರದಲ್ಲಿ ಕಲಾಸಂಕುಲ ಸಂಸ್ಥೆ ವತಿಯಿಂದ ಆಯೋಜಿಸಿದ್ದ ರಸಮಂಜರಿ ಹಾಗೂ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ವೇಳೆ ಜಿ.ಎಸ್ ಶಿವರುದ್ರಪ್ಪ ರಚಿಸಿದ ಕಾಣದ ಕಡಲಿಗೆ ಹಂಬಲಿಸಿದೆ ಮನ ಹಾಡನ್ನ ಹಾಡುವ ಮೂಲಕ ಕಾರ್ಯಕ್ರಮದಲ್ಲಿ ವಿಶೇಷ ಗಮನ ಸೆಳೆದರು. ಎಸ್ಪಿ ಹಾಡಿಗೆ ಜನರು ಕೇಕೆ ಹೊಡೆದು, ಹೆಜ್ಜೆ ಹಾಕಿದ್ರು. ಸಮಾರಂಭದಲ್ಲಿ ಕಿರುತೆರೆ ನಟಿ ಮೀನಾ, ಕಲಾಸಂಕುಲ ಸಂಸ್ಥೆ ಅಧ್ಯಕ್ಷೆ ರೇಖಾ ಬಡಿಗೇರ್, ಕಾರ್ಯದರ್ಶಿ ಮಾರುತಿ ಬಡಿಗೇರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
TAGGED:
SP C.B Vedamurthy song