ಶಾಸಕಿ ಪೂರ್ಣಿಮಾ ಕೊರೊನಾದಿಂದ ಶೀಘ್ರ ಗುಣಮುಖರಾಗಲಿ: ಯಾದವ ಸಮಾಜದಿಂದ ವಿಶೇಷ ಪೂಜೆ - ಶಿವಮೊಗ್ಗ ಜಿಲ್ಲಾ ಯಾದವ ಯುವ ಘಟಕ
ಹಿರಿಯೂರಿನ ಬಿಜೆಪಿ ಶಾಸಕಿ ಪೂರ್ಣಿಮಾ ಅವರು ಕೊರೊನಾದಿಂದ ಬೇಗ ಗುಣಮುಖರಾಗಲಿ ಎಂದು ಶಿವಮೊಗ್ಗ ಜಿಲ್ಲಾ ಯಾದವ ಯುವ ಘಟಕ ಹಾಗೂ ಜಿಲ್ಲಾ ಯಾದವ ಸಮಾಜದಿಂದ ವಿಶೇಷ ಪೂಜೆ ಸಲ್ಲಿಸಲಾಯಿತು. ನಗರದ ಬಿ.ಹೆಚ್. ರಸ್ತೆಯ ಮೈಲಾರೇಶ್ಚರ ದೇವಾಲಯದಲ್ಲಿ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಲಾಯಿತು.