ಕರ್ನಾಟಕ

karnataka

ETV Bharat / videos

'ಚೈನಾದಲ್ಲಿ ಫೇಮಸ್ಸು-ಇಂಡಿಯಾಗೂ ಬಂತು ವೈರಸ್'​- ಕೋವಿಡ್​-19​ ಜಾಗೃತಿ ಹಾಡು ಕಟ್ಟಿದ ಬೆಂಗಳೂರಿನ ಹೈದ - ಕೊರೊನಾ ಹಾಡು

By

Published : Mar 17, 2020, 12:50 PM IST

ಕೊರೊನಾ ಕರಿಛಾಯೆ ರಾಜ್ಯದ ವಿವಿಧೆಡೆ ಭೀತಿ ಉಂಟುಮಾಡುತ್ತಿರುವ ಹೊತ್ತಿನಲ್ಲಿ ಬೆಂಗಳೂರಿನ ಮುರುಗನ್ ಎಂಬಾತ ಕೊರೊನಾ ಬಗ್ಗೆ ಹಾಡು ಕಟ್ಟಿ ಗಮನ ಸೆಳೆದಿದ್ದಾರೆ. 'ನೋಡಲಾಗದು- ಹಿಡಿಯಲಾಗದು ಟಾರ್ಚ್ ಹಾಕಿ ಹುಡುಕಿದರೂ ಕಣ್ಣಿಗೆ ಕಾಣದು, ಚೈನಾದಲ್ಲಿ ಫೇಮಸ್ಸು-ಇಂಡಿಯಾಗೂ ಬಂದ್ ಬಿಡ್ತು' ಎಂದು ಹಾಡಿನ ಮೂಲಕ ಅವರು ಆತಂಕ ಹೊರಹಾಕುವ ಜೊತೆಗೆ ಹಸಿಹಸಿಯಾಗಿ ಇಲಿ, ಬಾವಲಿ ತಿಂದಿದ್ದರಿಂದ ಕೊರೊನಾ ಹರಡಿದೆ ಎಂದು ಆರೋಪಿಸಿದ್ದಾನೆ ಯುವಕ. ಈ ಕುರಿತು, ಅವರು ಈಟಿವಿ ಭಾರತದೊಂದಿಗೆ ಮಾತನಾಡಿ, ಕೊರೊನಾ ವೈರಸ್​ನಿಂದ ಆರೋಗ್ಯದಲ್ಲಿ ಮತ್ತು ವ್ಯವಹಾರ-ವ್ಯಾಪಾರದಲ್ಲಿ ತೊಂದರೆ ಆಗುತ್ತಿದೆ. ಕೊರೊನಾ ವೈರಸ್​ನಿಂದ ಜನರು ಮುನ್ನೆಚ್ಚರಿಕೆ ಕ್ರಮ ವಹಿಸಲಿ ಎಂದು ಹಾಡು ಬರೆದು ಹಾಡಿರುವುದಾಗಿ ತಿಳಿಸಿದ್ದಾರೆ. ಯೂಟ್ಯೂಬ್​ನಲ್ಲಿ ಅಪ್ ಲೋಡ್ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ಲಾಗ್ತಿದೆ.

ABOUT THE AUTHOR

...view details