ದೇಶ ಉಳಿದರೆ ನಾವು ಉಳಿಯುತ್ತೇವೆ: ಮತ ಹಕ್ಕು ಚಲಾಯಿಸಿ ಎಂದ ಅಭ್ಯರ್ಥಿಗಳು, ಗಣ್ಯರು - ನಿರ್ಮಲಾ ಸೀತಾರಾಮನ್
ಏಳು ಹಂತಗಳ ಲೋಕಸಭೆ ಚುನಾವಣೆಯಲ್ಲಿ ಎರಡನೇ ಹಂತದ ಮತದಾನ ಇವತ್ತು ನಡೆಯುತ್ತಿದ್ದು, ಆಯಾ ಕ್ಷೇತದಲ್ಲಿನ ಅಭ್ಯರ್ಥಿಗಳು, ರಾಜಕೀಯ ಮುಖಂಡರು ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡುತ್ತಿದ್ದಾರೆ. ಇನ್ನು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ.ವಿ.ಸದಾನಂದಗೌಡ, ಬಿಜೆಪಿ ಶಾಸಕ ಸುರೇಶ್ ಕುಮಾರ್ ಹಾಗೂ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ತಮ್ಮ ಮತಕ್ಷೇತ್ರಕ್ಕೆ ಬಂದು ಹಕ್ಕು ಚಲಾವಣೆ ಮಾಡಿದರು. ಬಳಿಕ ತಮ್ಮ ಅಭಿಪ್ರಾಯವನ್ನೂ ತಿಳಿಸಿದರು.