ಸೈನಿಕರು ಯುದ್ಧ ಮಾಡೋದು, ಮೋದಿ ಏನು ಗನ್ ತಗೊಂಡ್ ಹೋಗಿದ್ರಾ: ಸಿದ್ದು ಪ್ರಶ್ನೆ - kannada news
ಚಾಮರಾಜನಗರ: ಯುದ್ಧ ಮಾಡೋದು ಸೈನಿಕರು. ಪ್ರಧಾನಿ ಮೋದಿ ಏನು ಗನ್ ತೆಗೆದುಕೊಂಡು ಹೋಗಿದ್ರಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಕೊಳ್ಳೇಗಾಲದಲ್ಲಿ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯುಪಿಎ ಅವಧಿಯಲ್ಲಿ ಹೆಚ್ಚು ಭಯೋತ್ಪಾದನಾ ದಾಳಿಗಳಾಗಿದೆ ಎಂಬ ಪ್ರಶ್ನೆಗೆ ಖಾರವಾಗಿ ಪ್ರತಿಕ್ರಿಯಿಸಿದರು. ಈಗೇನು ಮೋದಿ ಗನ್ ತೆಗೆದುಕೊಂಡು ಹೋಗಿದ್ರಾ, ಈ ಹಿಂದಿನ ಯುದ್ಧಗಳಲ್ಲಿ ಮೋದಿ ಎಲ್ಲಿದ್ದರು ಎಂದರು.