ಕಂಕಣ ಸೂರ್ಯಗ್ರಹಣ: ತಾಮ್ರದ ತಟ್ಟೆಯ ಮೇಲೆ ಒನಕೆ ನಿಲ್ಲಿಸಿದ್ದೇಕೆ? - ಕಂಕಣ ಸೂರ್ಯ ಗ್ರಹಣ ಸುದ್ದಿ ಬೆಳಗಾವಿ
ಬೆಳಗಾವಿ: ಕಂಕಣ ಸೂರ್ಯಗ್ರಹಣ ಹಿನ್ನೆಲೆಯಲ್ಲಿ ತಾಮ್ರದ ತಟ್ಟೆಯ ಮೇಲೆ ಒನಕೆ ನಿಲ್ಲಿಸಿರುವುದು ಜಿಲ್ಲೆಯ ಸವದತ್ತಿ ತಾಲೂಕಿನ ಇಂಚಲ ಗ್ರಾಮದಲ್ಲಿ ನಡೆದಿದೆ. ಇಂಚಲ ಗ್ರಾಮದ ಮೇಟಿ ಎಂಬುವರ ಮನೆಯ ಹಾಲ್ನಲ್ಲಿ ತಟ್ಟೆಯ ಮೇಲೆ ಒನಕೆ ನಿಲ್ಲಿಸಲಾಗಿದೆ. ಸೂರ್ಯಗ್ರಹಣ ಮುಗಿಯುತ್ತಿದ್ದಂತೆ ಒನಕೆ ತಾನಾಗಿಯೇ ಕೆಳಗೆ ಬೀಳುತ್ತೆ ಎಂಬ ನಂಬಿಕೆ ಈ ಭಾಗದ ಜನರದ್ದಾಗಿದೆ.