ವಿಸ್ಮಯ: ದೇವಸ್ಥಾನದ ಬಂಡೆಯ ಮೇಲೆ ಗ್ರಹಣ ಗೋಚರ! - ಮಸ್ಕಿ ಪಟ್ಟಣದಲ್ಲಿ ಐತಿಹಾಸಿಕ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಾಲಯ
ರಾಯಚೂರು: ದೇವಸ್ಥಾನದೊಳಗೆ ಕಂಕಣ ಸೂರ್ಯಗ್ರಹಣ ಗೋಚರಿಸಿ ವಿಸ್ಮಯ ಮೂಡಿಸಿದೆ. ಜಿಲ್ಲೆಯ ಮಸ್ಕಿ ಪಟ್ಟಣದಲ್ಲಿ ಐತಿಹಾಸಿಕ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಾಲಯದೊಳಗಿನ ಕಲ್ಲು ಬಂಡೆಯ ಗ್ರಹಣದ ಚಿತ್ರ ಮೂಡಿಬಂದಿದೆ. ದೇವಾಲಯದ ಮೇಲಿರುವ ಕಿಟಕಿಯ ಮೂಲಕ ಗರ್ಭಗುಡಿಯ ದ್ವಾರದ ಮುಂದೆ ಹಾಕಿರುವ ಬಂಡೆಯ ಮೇಲೆ ಸಲಕರಣೆಗಳಲ್ಲಿದೆ ಕಂಡು ಬಂದ ಗ್ರಹಣ ಕುತೂಹಲದ ಕೇಂದ್ರಬಿಂದುವಾಯಿತು.