ಮಾನವ ಹಕ್ಕಿನ ಉಲ್ಲಂಘನೆಯಾದಲ್ಲಿ ಪ್ರತಿಯೊಬ್ಬರೂ ಧ್ವನಿ ಎತ್ತಬಹುದು: ಭವ್ಯಾ ನರಸಿಂಹಮೂರ್ತಿ - ಬೆಂಗಳೂರು ಇತ್ತೀಚಿನ ಸುದ್ದಿ ೠ
ಮಂಗಳೂರು: ಮಾನವ ಹಕ್ಕುಗಳ ಉಲ್ಲಂಘನೆಯಾದ ಸಂದರ್ಭದಲ್ಲಿ ಯಾವುದೇ ದೇಶದ ವ್ಯಕ್ತಿಗಳೂ ಅದರ ವಿರುದ್ಧ ಧ್ವನಿ ಎತ್ತಬಹುದು ಎಂದು ಸಾಮಾಜಿಕ ಕಾರ್ಯಕರ್ತೆ ಭವ್ಯಾ ನರಸಿಂಹಮೂರ್ತಿ ಅಭಿಪ್ರಾಯಪಟ್ಟರು. ಕೇಂದ್ರದ ರೈತ ಮಸೂದೆಯನ್ನು ವಿರೋಧಿಸಿ ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಬಗ್ಗೆ ಟ್ವೀಟ್ ಮಾಡಿರುವ ಅಮೇರಿಕಾದ ಪಾಪ್ ಗಾಯಕಿ ರಿಹಾನ ವಿರುದ್ಧ ಭಾರತದ ನೆಟ್ಟಿಗರು ಭಾರತದ ಆಂತರಿಕ ವಿಚಾರದ ಬಗ್ಗೆ ಮಾತನಾಡುವ ಅವಶ್ಯಕತೆಯಿಲ್ಲವೆಂದು ತಿರುಗಿ ಬಿದ್ದಿದ್ದಾರೆ. ಆದರೆ ದಿಲ್ಲಿಯಲ್ಲಿ ಪ್ರತಿಭಟನಾನಿರತ ರೈತರಲ್ಲಿ ಈಗಾಗಲೇ 170 ಮಂದಿ ಮೃತಪಟ್ಟಿದ್ದು, ಪ್ರತಿಭಟನೆ ನಡೆಯುವ ಸ್ಥಳದಲ್ಲಿ ನೀರು ಸೇರಿ ಇನ್ನಿತರ ಮೂಲಭೂತ ಸೌಕರ್ಯಗಳನ್ನು ಸ್ಥಗಿತಗೊಳಿಸಲಾಗಿದೆ. ಇಂಟರ್ನೆಟ್ ಕಡಿತ ಮಾಡಲಾಗಿದೆ. ಇದು ದೇಶದ ಆಂತರಿಕ ವಿಚಾರವಾಗದೆ, ಮಾನವ ಹಕ್ಕಿನ ಉಲ್ಲಂಘನೆಯಾಗಿದೆ. ಇಂತಹ ವಿಚಾರಗಳ ಬಗ್ಗೆ ಜಗತ್ತಿನ ಯಾವುದೇ ದೇಶದ ಯಾವುದೇ ವ್ಯಕ್ತಿಗೂ ಮಾತನಾಡುವ, ವಿರೋಧಿಸುವ ಹಕ್ಕು ಇದೆ ಎಂದು ಹೇಳಿದರು.