ನೋಡಿ: ಮಂಜಿನಲ್ಲಿ ಮಿಂದೆದ್ದ ಮಾದಪ್ಪನ ಬೆಟ್ಟ - ಮಾದಪ್ಪನ ಬೆಟ್ಟ
ಚಾಮರಾಜನಗರ: ವಾಯುಭಾರ ಕುಸಿತದ ಪರಿಣಾಮ ಮಾದಪ್ಪನ ಬೆಟ್ಟ ಮಂಜಿನಲ್ಲಿ ಮಿಂದೇಳುತ್ತಿದ್ದು ಸ್ಥಳೀಯರು, ಪ್ರವಾಸಿಗರು ದೃಶ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಪೊನ್ನಾಚಿ, ಪಾಲಾರ್ ರಸ್ತೆ, ತಾಳಬೆಟ್ಟದಿಂದ ಮಲೆಮಹದೇಶ್ವರ ಬೆಟ್ಟಕ್ಕೆ ಹೋಗುವ ಹಾದಿಯಲ್ಲಿ ಹಚ್ಚ ಹಸುರಿನ ಬೆಟ್ಟ ಹಾಲಿನಲ್ಲಿ ಮಿಂದೇಳುತ್ತಿದ್ದಂತೆ ಭಾಸವಾಗುತ್ತಿದೆ. ಇಲ್ಲೀಗ ತಂಪಾದ ವಾತಾವರಣ ನಿರ್ಮಾಣವಾಗಿದೆ. ಹಿಮಾಲಯ ಪರ್ವತಗಳಂತೆ ಕ್ಯಾಮೆರಾದ ಕಣ್ಣುಗಳಿಗೆ ಮಲೆಮಹದೇಶ್ವರ ಬೆಟ್ಟದ ಸಾಲುಗಳು ಸೆರೆಯಾಗಿವೆ.