ಶಿವಮೊಗ್ಗದ ಪೊಲೀಸ್ ಠಾಣೆಯೊಳಗೆ ಪ್ರತ್ಯಕ್ಷವಾದ ನಾಗಪ್ಪ! - ಸಂಚಾರಿ ಠಾಣೆಯಲ್ಲಿ ನಾಗರಹಾವು
ಇಲ್ಲಿನ ವಿದ್ಯಾನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ನಾಗರ ಹಾವೊಂದು ಪ್ರತ್ಯಕ್ಷವಾಗಿ ಎಲ್ಲರ ಭೀತಿಗೆ ಕಾರಣವಾಗಿತ್ತು. ಹಾವು ಕಾಣಿಸಿಕೊಂಡಿದ್ದರಿಂದ ಭಯಗೊಂಡ ಸಿಬ್ಬಂದಿ ಉರಗ ರಕ್ಷಕ ಆಕಾಶ್ಗೆ ಕರೆ ಮಾಡಿದ್ದು, ಬಳಿಕ ಹಾವನ್ನು ಹಿಡಿದು ಸುರಕ್ಷಿತವಾಗಿ ಅರಣ್ಯ ಪ್ರದೇಶಕ್ಕೆ ಬಿಡಲಾಯಿತು.