ನಾಗರಹಾವನ್ನೇ ನುಂಗಿದ ಮತ್ತೊಂದು ನಾಗರಹಾವು! ವಿಡಿಯೋ - ಈಶ್ವರಿ ವಿಶ್ವವಿದ್ಯಾಲಯ
ಹುಬ್ಬಳ್ಳಿ: ಇಲ್ಲಿನ ಗಾಮನಗಟ್ಟಿ ಗ್ರಾಮದ ಈಶ್ವರಿ ವಿಶ್ವವಿದ್ಯಾಲಯ ಬಳಿ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ನಾಗರಹಾವನ್ನೇ ನುಂಗಿ ಸಂಕಷ್ಟದಲ್ಲಿದ್ದ ಮತ್ತೊಂದು ನಾಗರಹಾವನ್ನು ಸ್ನೇಕ್ ಸಂಗಮೇಶ ರಕ್ಷಿಸಿದ್ದಾರೆ. ನಾಗರಹಾವೊಂದು ಮತ್ತೊಂದು ನಾಗರಹಾವು ನುಂಗಿ ಒದ್ದಾಡುತ್ತಿದ್ದನ್ನು ಕಂಡ ಸ್ಥಳೀಯರು, ಸ್ನೇಕ್ ಸಂಗಮೇಶ್ಗೆ ಕರೆ ಮಾಡಿ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಅವರು, ಹಾವನ್ನು ಸೆರೆ ಹಿಡಿದು ನುಂಗಿದ ಹಾವನ್ನು ಹೊರ ತೆಗೆಸಿದರು. ನಂತರ ಹಾವನ್ನು ಸುರಕ್ಷಿತವಾಗಿ ಕಲಘಟಗಿಯ ಅರಣ್ಯ ಪ್ರದೇಶದಲ್ಲಿ ಬಿಟ್ಟು ಬಂದರು.