ಏರ್ ಕೂಲರ್ ಒಳಗೆ ಸಿಲುಕಿದ್ದ ನಾಗರ ಹಾವು ರಕ್ಷಣೆ: ವಿಡಿಯೋ - ಏರ್ ಕೂಲರ್ ಒಳಗೆ ಸಿಲುಕಿದ್ದ ನಾಗರ ಹಾವು ರಕ್ಷಣೆ
ಮೈಸೂರು: ಆಕಸ್ಮಿಕವಾಗಿ ಏರ್ ಕೂಲರ್ ಒಳಗೆ ಸಿಕ್ಕಿ ಹಾಕಿಕೊಂಡಿದ್ದ ನಾಗರ ಹಾವನ್ನು ಸುರಕ್ಷಿತವಾಗಿ ರಕ್ಷಣೆ ಮಾಡಲಾಯಿತು. ನಗರದ ಸಿಲ್ಕ್ ಫ್ಯಾಕ್ಟರಿಯ ಕೆ. ಆರ್.ಪುರಂ ನಿವಾಸಿ ಸೂರ್ಯ ಪ್ರಕಾಶ್ ಎಂಬುವರ ಮನೆಯಲ್ಲಿದ್ದ ಏರ್ ಕೂಲರ್ ಒಳಗೆ ನಾಗರ ಹಾವೊಂದು ಸಿಲುಕಿಕೊಂಡಿತ್ತು. ಇದನ್ನು ನೋಡಿದ ನಿವಾಸಿಗಳು ಕೂಡಲೇ ಸ್ನೇಕ್ ಶ್ಯಾಮ್ಗೆ ಕರೆ ಮಾಡಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಅವರು ಏರ್ ಕೂಲರ್ನ್ನು ಮನೆಯಿಂದ ಹೊರಗಡೆ ತಂದು ಹಾವನ್ನು ರಕ್ಷಿಸಿದ್ದಾರೆ.