ಗಂಗಾವತಿ ತಹಶೀಲ್ದಾರ್ ಕಚೇರಿಯಲ್ಲಿ ಲಾಕ್ ಆಗಿದ್ದ ನಾಗಪ್ಪ ರಿಲೀಸ್ - Gangavathi cobra rescue
ಗಂಗಾವತಿ: ಕಳೆದೆರೆಡು ದಿನಗಳಿಂದ ಮಿನಿ ವಿಧಾನಸೌಧದ ತಹಶೀಲ್ದಾರ್ ಕಚೇರಿಯ ಸಿಬ್ಬಂದಿಗೆ ಆಗೊಮ್ಮೆ ಈಗೊಮ್ಮೆ ಕಾಣಿಸಿಕೊಂಡು ಕಣ್ಮರೆಯಾಗುತ್ತಿದ್ದ ನಾಗರ ಹಾವು ಮತ್ತೆ ಕಚೇರಿಯಲ್ಲಿ ಪ್ರತ್ಯಕ್ಷವಾಗಿದೆ. ಕೂಡಲೇ ಕಚೇರಿ ಸಿಬ್ಬಂದಿ ಉರಗತಜ್ಞ ರಾಘು ಅವರಿಗೆ ಕರೆ ಮಾಡಿ ತಿಳಿಸಿದ್ದು, ತಕ್ಷಣ ಸ್ಥಳಕ್ಕೆ ಆಗಮಿಸಿದ ರಾಘು ಸುರಕ್ಷಿತವಾಗಿ ನಾಗರ ಹಾವನ್ನು ಹಿಡಿದು, ಕಾಡಿಗೆ ಬಿಟ್ಟು ಬಂದಿದ್ದಾರೆ.