ಕರ್ನಾಟಕ

karnataka

ETV Bharat / videos

ಕುಮಟಾ: ಕೊಟ್ಟಿಗೆಯನ್ನೇರಿದ್ದ ಕಾಳಿಂಗ ಸೆರೆ! - snake protection by pavan nayka

By

Published : Dec 2, 2020, 8:48 AM IST

Updated : Dec 2, 2020, 9:46 AM IST

ಕಾರವಾರ: ಕೊಟ್ಟಿಗೆಯ ಅಟ್ಟ ಏರಿ ಆತಂಕ ಸೃಷ್ಟಿಸಿದ್ದ ಕಾಳಿಂಗ ಸರ್ಪವೊಂದನ್ನು ರಕ್ಷಿಸಿ ಕಾಡಿಗೆ ಬಿಟ್ಟಿರುವ ಘಟನೆ ಕುಮಟಾ ತಾಲೂಕಿನ ನಾಗೂರಿನಲ್ಲಿ ನಡೆದಿದೆ. ನಾಗೂರಿನ ಶ್ರೀಕಾಂತ ಮಡಿವಾಳ ಎಂಬುವರ ಮನೆಯ ಕೊಟ್ಟಿಗೆಯನ್ನು ಏರಿದ್ದ ಕಾಳಿಂಗ ಸರ್ಪ ಎಷ್ಟು ಹೊತ್ತಾದರೂ ಕೂಡ ಕೆಳಗೆ ಇಳಿದಿರಲಿಲ್ಲ. ಇದರಿಂದ ಆತಂಕಗೊಂಡಿದ್ದ ಮನೆಯವರು ಕೊಟ್ಟಿಗೆಯಲ್ಲಿದ್ದ ದನಗಳನ್ನು ಹೊರಗೆ ಕಟ್ಟಿ, ತಕ್ಷಣ ಉರಗ ಪ್ರೇಮಿ ಪವನ್ ನಾಯ್ಕ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಅದರಂತೆ ಸ್ಥಳಕ್ಕಾಗಮಿಸಿದ ಪವನ್ ನಾಯ್ಕ, ಕಾಳಿಂಗ ಸರ್ಪ‌ ಸೆರೆ ಹಿಡಿದು ಕಾಡಿಗೆ ಬಿಟ್ಟಿದ್ದಾರೆ. ಸುಮಾರು 8 ಅಡಿ ಉದ್ದವಿದ್ದು, ಆಹಾರವನ್ನರಸಿ ಬಂದಿರಬೇಕು. ಇಂತಹ ವೇಳೆ ಹಾವಿಗೆ ಯಾವುದೇ ತೊಂದರೆ ನೀಡದೆ ಹತ್ತಿರದ ಅರಣ್ಯ ಇಲಾಖೆ ಇಲ್ಲವೇ ನನಗೆ ತಿಳಿಸಿದಲ್ಲಿ ಬಂದು ಹಾವನ್ನು ಹಿಡಿಯುವುದಾಗಿ ಸ್ಥಳೀಯರಿಗೆ ತಿಳಿಸಿ, ಪವನ್ ನಾಯ್ಕ ಜಾಗೃತಿ ಮೂಡಿಸಿದರು.
Last Updated : Dec 2, 2020, 9:46 AM IST

ABOUT THE AUTHOR

...view details