ಕರ್ನಾಟಕ

karnataka

ETV Bharat / videos

ಕಾಲೇಜಿಗೆ ಬಂದ ನಾಗಪ್ಪ ಜೆರಾಕ್ಸ್​ ಮಷೀನ್​ ಕೆಳಗೆ ಬೆಚ್ಚಗೆ ಮಲಗಿದ್ದ... ಮುಂದೇನಾಯ್ತು? - ನಾಗರಹಾವಿನ ಸ್ಥಳೀಯ ಅರಣ್ಯಕ್ಕೆ ಬಿಟ್ಟಿದ್ದಾರೆ

By

Published : Nov 13, 2019, 7:50 PM IST

ಚಿಕ್ಕಮಗಳೂರು: ನಗರದಲ್ಲಿರುವ ಎಐಟಿ ಎಂಜಿನಿಯರಿಂಗ್ ಕಾಲೇಜಿನ ಆಡಳಿತ ಕಚೇರಿಯೊಳಗೆ ಬೃಹತ್ ಗಾತ್ರದ ನಾಗರಹಾವು ಕಾಣಿಸಿಕೊಂಡಿದ್ದು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಭಯಭೀತಗೊಂಡ ಘಟನೆ ನಡೆದಿದೆ. ಕಚೇರಿಯ ಕೊಠಡಿಗಳನ್ನು ಕಸ ಗುಡಿಸುವ ವೇಳೆ ಅಟೆಂಡರ್​ ಜೆರಾಕ್ಸ್ ಮಿಷನ್ ಹಾಗೂ ಚೇರ್ ಮಧ್ಯೆ ಅಡಗಿ ಕುಳಿತಿದ್ದ ನಾಗರಹಾವನ್ನು ನೋಡಿ ಕಾಲೇಜಿನ ಇತರೆ ಸಿಬ್ಬಂದಿಗೆ ವಿಚಾರ ತಿಳಿಸಿದ್ದಾರೆ. ಕೂಡಲೇ ಚಿಕ್ಕಮಗಳೂರಿನ ಉರಗ ತಜ್ಞ ಸ್ನೇಕ್ ನರೇಶ್ ಅವರನ್ನು ಸ್ಥಳಕ್ಕೆ ಕರೆಸಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ನರೇಶ್ ಅವರು ನಾಗರಹಾವನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದು, ಸುರಕ್ಷಿತವಾಗಿ ಸ್ಥಳೀಯ ಅರಣ್ಯಕ್ಕೆ ಬಿಟ್ಟಿದ್ದಾರೆ.

ABOUT THE AUTHOR

...view details