ಹುಬ್ಬಳ್ಳಿ: ದೀಪಾವಳಿ, ಕಾರ್ತಿಕ ಮಾಸದ ಮೆರುಗು ಹೆಚ್ಚಿಸಿದ ಆಕಾಶ ಬುಟ್ಟಿ- Watch Video - ಆಕಾಶ ಬುಟ್ಟಿ ಹಬ್ಬ
ಹುಬ್ಬಳ್ಳಿ: ಕತ್ತಲು ಕಳೆದು ಬೆಳಕಿನ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸುವ ಹಿನ್ನೆಲೆಯಲ್ಲಿ ವಾಣಿಜ್ಯ ನಗರಿ ಹುಬ್ಬಳ್ಳಿಯ (Hubballi) ಕಮರಿಪೇಟೆಯ ಸುತ್ತಮುತ್ತಲಿನ 32 ಓಣಿಗಳಲ್ಲಿ ಆಕಾಶ ಬುಟ್ಟಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ದೀಪಾವಳಿ ಮತ್ತು ಕಾರ್ತಿಕ ಮಾಸದ ಅಂಗವಾಗಿ ಇಲ್ಲಿನ ಯುವಕರು 'ಹುಬ್ಬಳ್ಳಿ ಆಕಾಶ ಬುಟ್ಟಿ ಹಬ್ಬ' ಹಮ್ಮಿಕೊಂಡಿದ್ದರು. ಇದರ ಅಂಗವಾಗಿ ಮಕ್ಕಳಿಗೆ ಆಕಾಶ ಬುಟ್ಟಿ ತಯಾರಿಕೆ ಹಾಗು ಮಹಿಳೆಯರಿಗೆ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ಒಟ್ಟು 35 ಮಕ್ಕಳು ಹಾಗು ಸಾವಿರಕ್ಕೂ ಹೆಚ್ಚು ಮಹಿಳೆಯರು ಪಾಲ್ಗೊಂಡಿದ್ದರು. ಬಳಿಕ ತಾವು ತಯಾರಿಸಿದ ಆಕಾಶ ಬುಟ್ಟಿಗಳನ್ನು ಕಮರೆಮ್ಮ ದೇವಸ್ಥಾನದ ಸಭಾಂಗಣದಲ್ಲಿ ಪ್ರದರ್ಶಿಸಿದರು.