ಸಿಂದಗಿ ಉಪ ಚುನಾವಣೆ.. ಟಿಕೆಟ್ ಇನ್ನೂ ಯಾರಿಗೂ ಫಿಕ್ಸ್ ಆಗಿಲ್ಲ.. ಸಚಿವೆ ಜೊಲ್ಲೆ - ಸಿಂದಗಿ ಉಪ ಚುನಾವಣೆ
ಮುದ್ದೇಬಿಹಾಳ : ಸಿಂದಗಿ ಉಪ ಚುನಾವಣೆಯಲ್ಲಿ ಟಿಕೆಟ್ ಇನ್ನೂ ಯಾರಿಗೂ ಫಿಕ್ಸ್ ಆಗಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು. ತಾಲೂಕಿನ ಬಸರಕೋಡದಲ್ಲಿ ಮಂಗಳವಾರ ರೈತರಿಗೊಂದು ದಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಂದಗಿ ಉಪ ಚುನಾವಣೆಗೆ ಬಿಜೆಪಿಯಲ್ಲಿ ಟಿಕೆಟ್ಗೆ ಹೆಚ್ಚಿನ ಆಕಾಂಕ್ಷಿಗಳಿದ್ದಾರೆ. ವರಿಷ್ಠರು ಯಾರಿಗೆ ಟಿಕೆಟ್ ಕೊಡಬೇಕು ಎಂಬುದನ್ನು ತೀರ್ಮಾನಿಸಲಿದ್ದಾರೆ ಎಂದರು.