ಮಂಜಿನ ನಗರಿಯಲ್ಲಿ ಸರಳ ಯುಗಾದಿ ಆಚರಣೆ - Ugadi Celebration in Madikeri
ಕೊಡಗು/ಮಡಿಕೇರಿ: ಭಾರತೀಯ ಸಂಸ್ಕೃತಿಯ ಹೊಸ ವರ್ಷವೇ ಯುಗಾದಿ. ಕೊಡಗು ಜಿಲ್ಲೆಯಲ್ಲಿ ಕೊರೊನಾ ವೈರಸ್ ಆತಂಕದ ನಡುವೆಯೂ ಸರಳವಾಗಿ ಹಬ್ಬವನ್ನು ಆಚರಿಸಲಾಯಿತು. ಜಿಲ್ಲೆಯಲ್ಲಿ ಯುಗಾದಿ ಹಬ್ಬದ ದಿನ ಬಹುತೇಕರು ತಮ್ಮ ಮನೆಯನ್ನು ತಳಿರು-ತೋರಣಗಳಿಂದ ಸಿಂಗರಿಸಿ ಹೊಸ ವರ್ಷವನ್ನು ಸ್ವಾಗತಿಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ಜಿಲ್ಲೆಯ ಜನರು ದೇವಾಲಯಗಳಿಗೆ ತೆರಳದೆ ಮನೆಯಲ್ಲೇ ಪೂಜೆ ಸಲ್ಲಿಸಿದ್ದಾರೆ. ಈ ಕೊರೊನಾ ವೈರಸ್ ಮಾಹಾಮಾರಿ ಈ ದೇಶವನ್ನು ಬಿಟ್ಟು ತೊಲಗಬೇಕು ಎಂದು ಹಲವರು ಪ್ರಾರ್ಥಿಸಿದರು.