ಕೊರೊನಾ ಕಾಟ: ಹಾಸನದಲ್ಲಿ ಸರಳ ಯುಗಾದಿ ಆಚರಣೆ - ಹಾಸನದಲ್ಲಿ ಸರಳ ಯುಗಾದಿ ಆಚರಣೆ
ಹಾಸನ: ಹೆಮ್ಮಾರಿ ಕೊರೊನಾ ಭೀತಿ ಹಿನ್ನೆಲೆ ಇವತ್ತು ಹಾಸನ ಸೇರಿದಂತೆ ಜಿಲ್ಲೆಯ ಗ್ರಾಮೀಣ ಭಾಗದ ಜನರು ಸರಳವಾಗಿ ಯುಗಾದಿ ಆಚರಿಸುವ ಮೂಲಕ ಹೊಸ ವರ್ಷವನ್ನು ಬರಮಾಡಿಕೊಂಡರು. ಗ್ರಾಮೀಣ ಭಾಗದಲ್ಲಿ ಕೆಲ ಮಕ್ಕಳು ಎಣ್ಣೆ ಹಚ್ಚಿಕೊಂಡು ಕೆಲ ಹೊತ್ತು ಬಿಸಿನಲ್ಲಿ ಆಟವಾಡಿ ಅಭ್ಯಂಜನ ಸ್ನಾನ ಮಾಡಿ ಖುಷಿ ಪಟ್ಟರು. ಇನ್ನು ಶ್ರವಣಬೆಳಗೊಳ ಸಮೀಪದ ಮಾತೃ ಭೂಮಿ ವೃದ್ಧಾಶ್ರಮದ ಮಾಲೀಕರು ಆಶ್ರಮದ ಸದಸ್ಯರಿಗೆ ಬೇವು-ಬೆಲ್ಲ ತಿನಿಸಿದ್ರು. ಪ್ರತಿ ವರ್ಷವೂ ಕೂಡ ಭರ್ಜರಿಯಾಗಿ ಯುಗಾದಿಯನ್ನು ಬರಮಾಡಿಕೊಳ್ಳುತ್ತಿದ್ದ ಮಂದಿ ಇವತ್ತು ಮನೆಯಿಂದ ಹೊರ ಬಾರದಂತೆ ಜಿಲ್ಲಾಡಳಿತ ಆದೇಶ ನೀಡಿದ್ದರಿಂದ ಸರಳವಾಗಿ ಆಚರಣೆ ಮಾಡಿದರು.