ಅರಮನೆ ಆವರಣದಲ್ಲಿ ಸರಳ ಜಂಬೂಸವಾರಿಗೆ ತಾಲೀಮು
ಮೈಸೂರು: ಅರಮನೆಯ ಆವರಣದಲ್ಲಿ ಸರಳ ಜಂಬೂಸವಾರಿಗೆ ತಾಲೀಮು ನಡೆಯಿತು. ಚಿನ್ನದ ಅಂಬಾರಿ ಹೊರುವ ಅಭಿಮನ್ಯು ಆನೆ, ಕುಮ್ಕಿ ಆನೆಗಳಾದ ಕಾವೇರಿ ಹಾಗೂ ವಿಜಯ ಆನೆಗಳಿಗೆ ಪುಷ್ಪಾರ್ಚನೆ ಮಾಡಿ ನಂತರ ರಾಷ್ಟ್ರಗೀತೆ ನುಡಿಸಲಾಯಿತು. ಈ ತಾಲೀಮಿನಲ್ಲಿ ಎರಡು ಅಶ್ವದಳದ 30 ಕುದುರೆಗಳು, ಪೊಲೀಸ್ ಬ್ಯಾಂಡ್ ಭಾಗವಹಿಸಿದ್ದವು. ಪುಷ್ಪಾರ್ಚನೆ ನಂತರ 21 ಸುತ್ತು ಕುಶಾಲತೋಪುಗಳನ್ನು ಸಿಡಿಸಲಾಯಿತು. ಆ ನಂತರ ಮೆರವಣಿಗೆ ತಾಲೀಮು ಅರಮನೆಯ ರಾಜಮನೆತನದವರು ವಾಸವಿರುವ ಕಡೆ ಒಂದು ಸುತ್ತು ಹಾಕಿ ಮುಕ್ತಾಯಗೊಂಡಿತು.