ಹೋಳಿ ಹಬ್ಬದ ಅಂಗವಾಗಿ ಅದ್ಧೂರಿಯಾಗಿ ಹಲಗೆ ಮೇಳ ಆಚರಣೆ - ಬಾಗಲಕೋಟೆ ನಗರದಲ್ಲಿ ಹಲಗೆ ಮೇಳ ಆಚರಣೆ
ಬಾಗಲಕೋಟೆ ನಗರದಲ್ಲಿ ಪ್ರತಿ ವರ್ಷ ನಡೆಯುವ ಹೋಳಿ ಹಬ್ಬವು ತನ್ನದೇ ಆದ ವೈಶಿಷ್ಟ್ಯ ಪಡೆದುಕೊಂಡಿದೆ. ಐತಿಹಾಸಿಕ ಹಿನ್ನೆಲೆ ಪಡೆದುಕೊಂಡು ಬಂದಿರುವ ಹೋಳಿ ಹಬ್ಬದ ಅಂಗವಾಗಿ ಜಿಲ್ಲೆಯ ವಿವಿಧೆಡೆ ಹಲಗೆ ಮೇಳ ನಡೆಸುವುದು ಸಾಮಾನ್ಯ. ಇಂದು ನವನಗರದ ಜಿಲ್ಲಾ ಆಸ್ಪತ್ರೆಯ ಬಳಿ ಮರಾಠ ಹಿತ ಚಿಂತಕ ಸಂಘ ಹಾಗೂ ಶ್ರೀ ಭವಾನಿ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಹಲಗೆ ಮೇಳ ಸ್ಪರ್ಧೆ ಏರ್ಪಡಿಸಲಾಗಿತ್ತು. ಇಲ್ಲಿ ಹಲಗೆ ನಾದಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಾ ಇರುವುದನ್ನು ನೋಡುವುದೇ ಒಂದು ಖುಷಿ. ಇದರ ಜೊತೆಗೆ ಹೋಳಿ ಹಬ್ಬದ ಸಮಯದಲ್ಲಿ ಹೋಳಿಗೆ ಸಂಬಂಧಿಸಿದ ಹಂತಿ ಪದ ಹಾಡುವುದು ವಿಶೇಷ. ಈ ಬಾರಿ ಪೊಲೀಸ್ ಇಲಾಖೆ ಸಿಬ್ಬಂದಿ ವೀರಣ್ಣ ಎಂಬುವರು ಹೋಳಿ ಪದ ಹಾಡಿ ಗಮನ ಸೆಳೆದರು.