ರಾಜ್ಯಾದ್ಯಂತ ಬೆಂಬಲಿಗರ ಗಲಾಟೆ; ಡಿಕೆಶಿ ಮನೆಯ ಸುತ್ತ ನೀರವ ಮೌನ - ಡಿಕೆಶಿ ಬಂಧನ
ಬೆಂಗಳೂರಿನ ಸದಾಶಿವನಗರದಲ್ಲಿರುವ ಡಿಕೆಶಿ ನಿವಾಸದ ಸುತ್ತ ನೀರವ ಮೌನ ಆವರಿಸಿದೆ. ಡಿಕೆಶಿ ಪತ್ನಿ ಉಷಾ, ಮಕ್ಕಳು ಮತ್ತು ಕುಟುಂಬಸ್ಥರು ಮನೆಯಲ್ಲಿಯೇ ನೊಣವಿನಕೆರೆ ಅಜ್ಜಯ್ಯ ಹಾಗೂ ಕಬ್ಬಾಳಮ್ಮ ದೇವಿಗೆ ಪೂಜೆ ಸಲ್ಲಿಸಿದ್ದಾರೆ. ಮಕ್ಕಳಿಗೆ ಧೈರ್ಯ ಹೇಳಿ ಕಳುಹಿಸಲಾಗಿದೆ. ಆದರೆ ಪ್ರತಿ ದಿನದಂತೆ ಡಿಕೆಶಿ ಮನೆಯ ಸುತ್ತಾ ಕಾರ್ಯಕರ್ತರು, ಆಪ್ತರು ಮೊಕ್ಕಾಂ ಹೂಡದಿರುವ ಕಾರಣ ನೀರವ ಮೌನ ಆವರಿಸಿದೆ. ಮತ್ತೊಂದೆಡೆ ಬಟ್ಟೆ, ಅಗತ್ಯ ವಸ್ತುಗಳು ಹಾಗೂ ಇಡಿಗೆ ಬೇಕಾದ ಕೆಲವು ದಾಖಲೆಗಳನ್ನ ತೆಗೆದುಕೊಂಡು ನಿನ್ನೆ ರಾತ್ರಿ ಆಪ್ತರು ದೆಹಲಿಗೆ ಪ್ರಯಾಣಿಸಿದ್ದಾರೆ. ಪ್ರತಿಭಟನೆ ಸಾಧ್ಯತೆ ಕಾರಣ ಕೇಂದ್ರ ವಿಭಾಗ ವ್ಯಾಪ್ತಿಯ ಪೊಲೀಸರು ಮನೆಯ ಸುತ್ತ ಬ್ಯಾರಿಕೇಡ್ ಅಳವಡಿಸಿ ಭದ್ರತೆ ಒದಗಿಸಿದ್ದಾರೆ.