ಮತ್ತೆ ಹೊತ್ತಿದ ಸಿಗ್ನಲ್ ಲೈಟ್ಸ್.. ಸಾರ್ವಜನಿಕರಿಂದ ಪೊಲೀಸ್ ಸಿಬ್ಬಂದಿಗೆ ಸನ್ಮಾನ.. - Koppal Signal Lights News
ಸುಮಾರು ಮೂರು ವರ್ಷಗಳಿಂದ ನಗರದ ಗಂಜ್ ಸರ್ಕಲ್ನಲ್ಲಿ ದುರಸ್ಥಿಗೆ ಬಂದು ನಿರುಪಯುಕ್ತವಾಗಿದ್ದ ಸಿಗ್ನಲ್ ಲೈಟ್ಗಳು ಮತ್ತೆ ಕೆಲಸ ಪ್ರಾರಂಭಿಸಿರುವುದಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಟಿ. ಶ್ರೀಧರ್ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾಗಿ ಜಿಲ್ಲೆಗೆ ಬಂದ ಮೇಲೆ ಸಿಗ್ನಲ್ ಲೈಟ್ಗಳು ತಮ್ಮ ಕಾರ್ಯ ಶುರು ಮಾಡಿವೆ. ಸಿಗ್ನಲ್ ಲೈಟ್ಗಳಿಲ್ಲದೆ ಸಂಚಾರ ನಿಯಮ ಪಾಲನೆಯಾಗುತ್ತಿರಲಿಲ್ಲ. ಈಗ ಸಮಸ್ಯೆಗೆ ಪರಿಹಾರ ಸಿಕ್ಕಿದೆ ಎಂದು ಜನರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
Last Updated : Nov 9, 2020, 4:47 PM IST