ಶಿಷ್ಯನನ್ನ ಬೆಳೆಸಲು ಶತಪ್ರಯತ್ನ ಮಾಡುತ್ತಿರುವ ಸಿದ್ದರಾಮಯ್ಯ ಯಶಸ್ಸು ಕಾಣುತ್ತಾರಾ? - ವಿಧಾನಪರಿಷತ್ ಸದಸ್ಯ ಪ್ರಕಾಶ್ ರಾಥೋಡ್ ಬೆಳೆಸುವ ಪ್ರಯತ್ನ ಮಾಡಿದ ಸಿದ್ಧರಾಮಯ್ಯ
ರಾಜ್ಯದ 15 ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಪ್ರಚಾರ ಕಾರ್ಯದಲ್ಲಿ ರಾಜ್ಯ ಕಾಂಗ್ರೆಸ್ ನಾಯಕರು ನಿರತರಾಗಿರುವ ಸಂದರ್ಭದಲ್ಲಿ ಮಹಾನಗರದಲ್ಲಿ ಹಿರಿಯ ನಾಯಕರು ವಿರಳವಾಗಿದ್ದು, ಈ ಸಂದರ್ಭವನ್ನೇ ಸದ್ಬಳಕೆ ಮಾಡಿಕೊಂಡಿರುವ ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಶಿಷ್ಯನ ರೀತಿ ಗುರುತಿಸಿಕೊಂಡಿರುವ ವಿಧಾನಪರಿಷತ್ ಸದಸ್ಯ ಪ್ರಕಾಶ್ ರಾಥೋಡ್ ರನ್ನು ಬೆಳೆಸುವ ಪ್ರಯತ್ನವನ್ನು ನಡೆಸಿದ್ದಾರೆ. ತಮ್ಮ ಪ್ರಯತ್ನದಲ್ಲಿ ಸದ್ಯ ಯಶಸ್ಸು ಕಂಡಿರುವ ಸಿದ್ದರಾಮಯ್ಯಗೆ ಮುಂದಿನ ದಿನಗಳಲ್ಲಿ ಎಷ್ಟರಮಟ್ಟಿನ ಪ್ರತಿರೋಧಗಳು ಎದುರಾಗಲಿವೆ ಎನ್ನುವುದನ್ನು ಕಾದು ನೋಡಬೇಕಿದೆ.