ಬಟ್ಟೆ ಹಾಕೋದು, ಬಿಚ್ಚೋದ್ರ ಬಗ್ಗೆ ಸದನದಲ್ಲಿ ಸ್ವಾರಸ್ಯಕರ ಚರ್ಚೆ: ಸಿದ್ದರಾಮಯ್ಯ ಹೇಳಿದ್ದೇನು ಕೇಳಿ.. - ಸಿದ್ದರಾಮಯ್ಯ ಪಂಚೆ ಬಗ್ಗೆ ಸದನದಲ್ಲಿ ಮಾತು
ಪೆಟ್ರೋಲ್, ಡೀಸೆಲ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿಚಾರವಾಗಿ ಸದನದಲ್ಲಿ ಸಿದ್ದರಾಮಯ್ಯ ಸರ್ಕಾರಕ್ಕೆ ಮಾತಿನಲ್ಲೇ ಚಾಟಿ ಬೀಸುತ್ತಿದ್ದರು. ಈ ವೇಳೆ ಬಟ್ಟೆ, ಧೋತಿ ಖರೀದಿ ವಿಚಾರವಾಗಿ ಹಾಗೂ ಸಿದ್ದರಾಮಯ್ಯ ಹಾಕಿಕೊಳ್ಳುವ ಪಂಚೆ ಬಗ್ಗೆ ಸ್ವಾರಸ್ಯಕರ ಚರ್ಚೆಯೂ ನಡೆಯಿತು. ನಾನು ದಾರಿಯಲ್ಲಿ ಬರುತ್ತಿದ್ದ ವೇಳೆ ಅಂಗಡಿಗಳನ್ನು ನೋಡ್ತಿದ್ದೆ. ಆದರೆ ಅಲ್ಲಿಗೀಗ ಯಾರು ಹೋಗುತ್ತಿಲ್ಲ. ಕಾರಣ ಜನರ ಬಳಿ ಖರೀದಿ ಮಾಡುವ ಶಕ್ತಿ ಇಲ್ಲ ಎಂದ ಸಿದ್ದರಾಮಯ್ಯ, ಬಟ್ಟೆ ಹಾಕಿಕೊಳ್ಳುವುದು ಮಾನ ಮುಚ್ಚಿಕೊಳ್ಳುವುದಕ್ಕೆ. ಆದರೆ ಈಗ ಬಟ್ಟೆ ಕಳಚಿಕೊಳ್ಳುವಂತಹ ನಿದರ್ಶನ ನೋಡ್ತಿದ್ದೇವೆ. ಅವೆಲ್ಲಾ ಸಮಾಜದಲ್ಲಿ ನಡೆಯಬಾರದು ಎಂದರು. ಇದೇ ವೇಳೆ ಮಾತನಾಡಿದ ಕೆ.ಆರ್.ರಮೇಶ್ ಕುಮಾರ್, ಬಟ್ಟೆ ಹಾಕಿಕೊಳ್ಳುವ ವಿಚಾರವಾಗಿ ದಿನಗಟ್ಟಲೆ ಮಾತನಾಡಲಿ, ಆದರೆ ಬಿಚ್ಚೋದರ ಬಗ್ಗೆ ಮಾತು ಬೇಡ ಎಂದು ಹಾಸ್ಯ ಚಟಾಕಿ ಹಾರಿಸಿದರು.