ಕುಣಿಯಲಾರದವಳು ನೆಲ ಡೊಂಕು ಎಂದಳಂತೆ,, ಅದು ನಮ್ ಕಡೆಯ ಗಾದೆ.. ಸಿದ್ದರಾಮಯ್ಯ ಸ್ಪಷ್ಟನೆ - statement in manglore
ಬೆಳ್ತಂಗಡಿ ನೆರೆ ಪೀಡಿತ ಪ್ರದೇಶ ವೀಕ್ಷಣೆ ಬಳಿಕ ಧರ್ಮಸ್ಥಳ ಕ್ಷೇತ್ರಕ್ಕೆ ಭೇಟಿ ನೀಡಿ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಕುಣಿಯಲಾರದ ನೃತ್ಯಗಾರ್ತಿ ನೆಲ ಡೊಂಕು ಎಂದಳು ಎಂಬರ್ಥದಲ್ಲಿ ನಾನು ನಿನ್ನೆ ಹೇಳಿಕೆ ಕೊಟ್ಟಿದ್ದೆ. ಇದು ಗಾದೆ ಮಾತು. ಇದರಲ್ಲಿ ವಿವಾದ ಮಾಡುವುದೇನಿದೆ. ಬಿಜೆಪಿ ವರಿಗೆ ಬೇರೆ ಕೆಲಸ ಇಲ್ಲ ಎಂದು ತಮ್ಮ ಹೇಳಿಕೆ ಕುರಿತು ಸ್ಪಷ್ಟನೆ ನೀಡಿದ್ದಾರೆ.