ಹದಗೆಟ್ಟ ಸಿದ್ದಾಪುರ - ಕುಮಟಾ ರಸ್ತೆ: ಸವಾರರಿಗೆ ಸವಾಲಾದ ಬದಲಿ ಮಾರ್ಗ! - road damage news
ಕಾರವಾರ: ಶಿರಸಿ - ಕುಮಟಾ ರಾಜ್ಯ ಹೆದ್ದಾರಿಯನ್ನ ಮೇಲ್ದರ್ಜೆಗೇರಿಸಲಾಗುತ್ತಿದ್ದು, ಗುತ್ತಿಗೆ ಪಡೆದ ಕಂಪನಿ ಕಾಮಗಾರಿಗೆ ಎರಡು ವರ್ಷಗಳ ಕಾಲಾವಕಾಶ ಕೇಳಿದೆ. ಇದರಿಂದ ಕರಾವಳಿ ಹಾಗೂ ಮಲೆನಾಡು ಭಾಗವನ್ನು ಬೆಸೆಯುವ ಪ್ರಮುಖ ಹೆದ್ದಾರಿಯೇ ಸಂಚಾರಕ್ಕೆ ಅಡ್ಡಿಯಾಗಲಿದ್ದು, ಜಿಲ್ಲಾಡಳಿತ ಬದಲಿ ಮಾರ್ಗಗಳನ್ನು ಸೂಚಿಸಿದೆ. ಆದರೆ, ಗುರುತಿಸಿದ ಬದಲಿ ರಸ್ತೆಯೊಂದು ದುರಸ್ತಿಗೆ ತಲುಪಿ ಹಲವು ವರ್ಷಗಳೇ ಕಳೆದಿದ್ದು, ಗುಂಡಿಗಳಿಂದಲೇ ತುಂಬಿರುವ ರಸ್ತೆಯಲ್ಲಿ ಸಂಚರಿಸುವುದು ಇದೀಗ ಸವಾರರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
Last Updated : Oct 27, 2020, 10:32 PM IST