ಉಡುಪಿಯಲ್ಲಿ ಅಸ್ವಸ್ಥಗೊಂಡ ಹದ್ದು ಪತ್ತೆ: ಆತಂಕಕ್ಕೆ ತೆರೆ ಎಳೆದ ಪಶುವೈದ್ಯ - Bird flu in Udupi
ಉಡುಪಿ: ಇಲ್ಲಿನ ಕುಕ್ಕಿಕಟ್ಟೆ ಭಾಗ್ಯಮಂದಿರದ ಬಳಿ ಅಸ್ವಸ್ಥಗೊಂಡ ಹದ್ದು ಕಂಡುಬಂದಿರುವ ಕಾರಣ ಜಿಲ್ಲೆಯಲ್ಲಿ ಹಕ್ಕಿಜ್ವರದ ಭೀತಿ ಆವರಿಸಿತ್ತು. ಮಾಹಿತಿ ತಿಳಿದ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಸ್ಥಳಕ್ಕೆ ಧಾವಿಸಿ, ಹಕ್ಕಿಜ್ವರ ಕಂಟ್ರೋಲ್ ರೂಂಗೆ ಮಾಹಿತಿ ನೀಡಿದರು. ಸ್ಥಳಕ್ಕಾಗಮಿಸಿದ ಪಶುವೈದ್ಯ ಡಾ. ಸಂದೀಪ್ ಕುಮಾರ್ ಅವರು, ವಿದ್ಯುತ್ ತಂತಿಯ ಸ್ಪರ್ಶದಿಂದ ಹದ್ದು ನೆಲಕ್ಕೆ ಉರುಳಿದೆ. ಪರಿಣಾಮ ಆಹಾರ ಸೇವನೆಗೆ ಅವಕಾಶ ಸಿಗದೆ ನಿತ್ರಾಣಗೊಂಡಿದೆ. ಹಕ್ಕಿಜ್ವರದ ಯಾವುದೇ ಲಕ್ಷಣಗಳಿಲ್ಲ ಎನ್ನುವ ಮೂಲಕ ಜನರ ಆತಂಕವನ್ನು ದೂರ ಮಾಡಿದರು.