ಕರ್ನಾಟಕ

karnataka

ETV Bharat / videos

ಶ್ರೀ ಸಿದ್ದೇಶ್ವರ ರಥೋತ್ಸವಕ್ಕೆ ಹರಿದು ಬಂತು ಭಕ್ತಸಾಗರ - ಶ್ರೀ ಸಿದ್ದೇಶ್ವರ ರಥೋತ್ಸವ

By

Published : Feb 24, 2021, 10:13 PM IST

ಕೊಪ್ಪಳ: ತಾಲೂಕಿನ ಅಳವಂಡಿ ಗ್ರಾಮದ ಶ್ರೀ ಸಿದ್ದೇಶ್ವರ ರಥೋತ್ಸವವು ಸಾವಿರಾರು ಭಕ್ತರ ಜಯಘೋಷದೊಂದಿಗೆ ಸಂಭ್ರಮದಿಂದ ನೆರವೇರಿತು. ಅಳವಂಡಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನರು ರಥೋತ್ಸವದಲ್ಲಿ ಪಾಲ್ಗೊಂಡು ರಥಕ್ಕೆ ಉತ್ತತ್ತಿ, ಬಾಳೆಹಣ್ಣು ಎಸೆದು ತಮ್ಮ ಭಕ್ತಿ ಸಮರ್ಪಿಸಿದರು. ಕೊರೊನಾ ಭೀತಿಯಿಂದ ಕಳೆದ ವರ್ಷ ಜಾತ್ರೆ ಹಾಗೂ ಆಚರಣೆಗಳು ಸ್ಥಗಿತಗೊಂಡಿದ್ದವು. ಇದೀಗ ಜಾತ್ರೆ, ಉತ್ಸವಗಳು ಆರಂಭಗೊಂಡಿದ್ದು, ಭಕ್ತರು ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದಾರೆ. ಶ್ರೀ ಸಿದ್ದೇಶ್ವರ ರಥೋತ್ಸವಕ್ಕೆ ಸಾವಿರಾರು ಜನರು ಆಗಮಿಸಿ ದೇವರ ದರ್ಶನ ಪಡೆದುಕೊಂಡರು.

ABOUT THE AUTHOR

...view details