ಕರ್ನಾಟಕ

karnataka

ETV Bharat / videos

ಇದೇ ಮೊದಲು ಬ್ರಾಹ್ಮಿಮುಹೂರ್ತದಲ್ಲಿ ಶ್ರೀ ಶರಣ ಬಸವೇಶ್ವರರ ಜಾತ್ರೆ ಸರಳ.. ರಥೋತ್ಸವಕ್ಕೆ ಭಕ್ತರು ವಿರಳ - shri sharanabasaveshwara fair at koppala

By

Published : Apr 2, 2021, 4:38 PM IST

ಕುಷ್ಟಗಿ(ಕೊಪ್ಪಳ): ಕೋವಿಡ್​ ಭೀತಿ ಹಿನ್ನೆಲೆ ಪ್ರಸಿದ್ಧ ಶ್ರೀ ಶರಣಬಸವೇಶ್ವರ ಜಾತ್ರಾ ಮಹೋತ್ಸವದ ರಥೋತ್ಸವ ಇಂದು ಬೆಳಗ್ಗೆ ಬ್ರಾಹ್ಮಿ ಮುಹೂರ್ತ (ಬೆಳಗ್ಗೆ 8.45ಕ್ಕೆ)ದಲ್ಲಿ ಸರಳವಾಗಿ ಜರುಗಿತು. ಜಾತ್ರಾ ಮಹೋತ್ಸವದ ಪ್ರಯುಕ್ತ ಪ್ರಾತಃಕಾಲದಲ್ಲಿ ಶ್ರೀ ಶರಣಬಸವೇಶ್ವರ ಮೂರ್ತಿಗೆ ಅಭಿಷೇಕ, ಸಹಸ್ರ ಬಿಲ್ವಾರ್ಚನೆ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳು ಸೀಮಿತ ಭಕ್ತರ ಸಂಖ್ಯೆಯಲ್ಲಿ ನಡೆಯಿತು. ರಥೋತ್ಸವದ ಹಿನ್ನೆಲೆ ರಥಾಂಗ ಹೋಮ ನಡೆಯಿತು. ಹಲವು ದಶಕಗಳ ಇತಿಹಾಸದಲ್ಲೇ ಬೆಳಗಿನ ಬ್ರಾಹ್ಮಿಮುಹೂರ್ತದಲ್ಲಿ ರಥೋತ್ಸವ ಜರುಗಿರುವುದು ಇದೇ ಮೊದಲು. ಸೇರಿದ್ದ ಭಕ್ತರೆಲ್ಲ ಕೊರೊನಾ ತೊಲಗಲೆಂದು ದೇವರಲ್ಲಿ ಬೇಡಿಕೊಂಡರು.

ABOUT THE AUTHOR

...view details