ಕರ್ನಾಟಕ

karnataka

ETV Bharat / videos

ರಾಯರ ಆರಾಧನಾ ಮಹೋತ್ಸವ: ವೈಭವದಿಂದ ನೆರವೇರಿದ ಉತ್ತರಾರಾಧನೆ - Aradhana Mahothsava

By

Published : Aug 18, 2019, 11:27 PM IST

ಮಂತ್ರಾಲಯದಲ್ಲಿ ಗುರುರಾಯರ ಉತ್ತರ ಆರಾಧನಾ ವೈಭವ ಅಪಾರ ಭಕ್ತ ಸಾಗರದ ಮಧ್ಯೆ ಸಡಗರದಿಂದ ನೆರವೇರಿತು. ಆರಾಧನಾ ಮಹೋತ್ಸವದ 5ನೇ ದಿನವಾದ ಇಂದು ಶ್ರೀಮಠದ ಬೀದಿಯಲ್ಲಿ ಪ್ರಹ್ಲಾದರಾಜರ ಉತ್ಸವ ಮೂರ್ತಿಯ ಮಹಾರಥೋತ್ಸವ ಜರುಗಿತು. ಮಹೋತ್ಸವದ ಅಂಗವಾಗಿ ದೇಶದ ವಿವಿಧೆಡೆಯಿಂದ ಆಗಮಿಸಿದ್ದ ಜಾನಪದ ಕಲಾ ತಂಡಗಳು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಕಾರ್ಯಕ್ರಮಕ್ಕೆ ಮೆರಗು ನೀಡಿತು. ದೇಶ ಹಾಗೂ ರಾಜ್ಯದ ನಾನಾ ಕಡೆಗಳಿಂದ ಆಗಮಿಸಿದ ಭಕ್ತರು ಈ ಅಪೂರ್ವ ಕ್ಷಣಗಳನ್ನು ಕಣ್ತುಂಬಿಕೊಂಡರು.

ABOUT THE AUTHOR

...view details