ಶ್ರಾವಣದ ಕಡೆಯ ಸೋಮವಾರ: ಉತ್ಸವ ಮೂರ್ತಿಗಳಿಗೆ ಗಂಗಾಸ್ನಾನ, ವಿಶೇಷ ಪೂಜೆ - ಶ್ರೀ ಬೀರಲಿಂಗ ದೇವರ ಉತ್ಸವ
ವಿಜಯಪುರ: ಇಂಡಿ ತಾಲೂಕಿನ ಹಳೆಯ ಪಡನೂರ ಗ್ರಾಮದ ಬಳಿಯ ಭೀಮಾ ನದಿಯಲ್ಲಿ ಶ್ರಾವಣ ಮಾಸದ ಕಡೆಯ ಸೋಮವಾರದ ಅಂಗವಾಗಿ ವಿವಿಧ ದೇವರ ಗಂಗಾಸ್ನಾನ, ವಿಶೇಷ ಪೂಜೆ ಹಾಗೂ ಪ್ರಸಾದ ವಿತರಣೆ ಕಾರ್ಯಕ್ರಮ ಜರುಗಿತು. ಸಮೀಪದ ಲಚ್ಯಾಣ ಗ್ರಾಮದ ಮಲ್ಲಿಕಾರ್ಜುನ ದೇವರ, ಶಂಕರಲಿಂಗ ಮಹಾಶಿವಯೋಗಿಗಳ ಹಾಗೂ ಬೀರಲಿಂಗ ದೇವರ ಉತ್ಸವ ಮೂರ್ತಿ ಹೊತ್ತ ಪಲ್ಲಕ್ಕಿಗಳ ಸಾಮೂಹಿಕ ಗಂಗಾಸ್ನಾನ ಕಾರ್ಯಕ್ರಮ ಶ್ರದ್ಧಾ ಭಕ್ತಿಯಿಂದ ಜರುಗಿತು. ಇನ್ನೂ ಪೂಜಾ ಕೈಂಕರ್ಯದ ವೇಳೆ ದೇವಸ್ಥಾನದ ಅರ್ಚಕರು ಮೊಳಗಿಸಿದ ಶಂಖ, ಗಂಟೆಗಳ ನಿನಾದ ನೋಡುಗರಲ್ಲಿ ಭಕ್ತಿ ಭಾವ ಮೂಡಿಸಿದ್ದು ವಿಶೇಷವಾಗಿತ್ತು.