ಸುಳ್ಳು ಮಾಹಿತಿ ನೀಡಿ ಪಿಎಂ ಕಿಸಾನ್ ಸಮ್ಮಾನ್ ಹಣ ಪಡೆದ ಆರ್ಥಿಕ ಸ್ಥಿತಿವಂತರು; ಮನೆಬಾಗಿಲಿಗೆ ಬಂದ ನೋಟಿಸ್ - false information
ಕಾರವಾರ : ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಸಹಾಯಧನ ಪಡೆಯಲು ಸುಳ್ಳು ಮಾಹಿತಿ ನೀಡಿದ್ದ ರೈತರಿಗೆ ರಾಜ್ಯ ಕೃಷಿ ಇಲಾಖೆ ಶಾಕ್ ನೀಡಿದೆ. ಸುಳ್ಳು ಮಾಹಿತಿ ನೀಡಿ ಯೋಜನೆಯ ಹಣ ಪಡೆದಿರುವ ಉತ್ತರಕನ್ನಡದ ಹಲವು ರೈತರಿಗೆ ಹಣ ಹಿಂತಿರುಗಿಸುವಂತೆ ನೋಟಿಸ್ ನೀಡಲಾಗಿದೆ. ಆರ್ಥಿಕ ಸ್ಥಿತಿವಂತರೂ ಎಂದೆನಿಸಿಕೊಂಡ ಹಲವು ರೈತರು ಸುಳ್ಳು ದಾಖಲೆ ಸೃಷ್ಟಿಸಿ ಬಡವರಿಗೆ ನೀಡುತ್ತಿದ್ದ ಹಣವನ್ನು ಪಡೆದುಕೊಂಡಿದ್ದರು. ಈಗ ಈ ನಕಲಿ ಜಾಲವನ್ನು ಪತ್ತೆ ಮಾಡಿರುವ ಕೃಷಿ ಇಲಾಖೆ ಅವರುಗಳ ಮನೆ ಬಾಗಿಲಿಗೆ ನೋಟಿಸ್ ಕಳುಹಿಸಿ ವಸೂಲಿಗೆ ಮುಂದಾಗಿದೆ.