ಮೋದಿ ಸುನಾಮಿಗೆ ರಾಜ್ಯದಲ್ಲಿ ಮೈತ್ರಿ ಪಕ್ಷಗಳು ಕೊಚ್ಚಿ ಹೋದ್ವು : ಶೋಭಾ ಕರಂದ್ಲಾಜೆ ಗೆಲುವಿನ ನುಡಿ - ಶೋಭಾ ಕರಂದ್ಲಾಜೆ
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಭರ್ಜರಿ ಗೆಲುವು ಸಿಕ್ಕಿದೆ. ಎರಡನೇ ಬಾರಿಗೆ ಶೋಭಾ ಕರಂದ್ಲಾಜೆ ಚುನಾಯಿತಗೊಂಡಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತಾಡಿರುವ ಅವರು, ಬಿಜೆಪಿ ದೇಶದಲ್ಲಿ ಜಯಭೇರಿ ಬಾರಿಸುತ್ತಿದೆ. ಎಕ್ಸಿಟ್ ಪೋಲ್ ಬಗ್ಗೆ ಸಿದ್ಧರಾಮಯ್ಯ ಕುಮಾರಸ್ವಾಮಿ ಗೇಲಿ ಮಾಡಿದ್ರು. ಮೋದಿ ಸುನಾಮಿಯಲ್ಲಿ ಕರ್ನಾಟಕದ ಮೈತ್ರಿಪಕ್ಷಗಳು ಕೊಚ್ಚಿಕೊಂಡು ಹೋಗುವಂತೆ ಮಾಡಿದೆ. ಜನ ಸಮ್ಮಿಶ್ರ ಸರ್ಕಾರದ ಜೊತೆ ಇಲ್ಲ. ಕುಮಾರಸ್ವಾಮಿ ಸರಕಾರಕ್ಕೆ ತಕ್ಕ ಪಾಠವನ್ನು ರಾಜ್ಯದ ಜನ ಕಲಿಸಿದ್ದಾರೆ ಎಂದರು.
Last Updated : May 23, 2019, 2:49 PM IST