ಕರ್ನಾಟಕ

karnataka

ETV Bharat / videos

ಗೆದ್ದ ಖುಷಿಯಲ್ಲಿ ಕಾರ್ಯಕರ್ತರೊಂದಿಗೆ ಶೋಭಾ ಸಖತ್​ ಸ್ಟೆಪ್​​!

By

Published : May 23, 2019, 9:48 PM IST

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಗೆಲುವಿನ ಖುಷಿಯಲ್ಲಿದ್ದು, ಕಾರ್ಯಕರ್ತರೊಂದಿಗೆ ಸಖತ್​ ಸ್ಟೆಪ್​​ ಹಾಕಿದರು. ಶೋಭಾ ಕರಂದ್ಲಾಜೆ 7 ಲಕ್ಷದ 18 ಸಾವಿರದ 916 ಮತಗಳನ್ನ ಪಡೆದು‌ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ವಿರುದ್ಧ ಜಯ ಗಳಿಸಿದ್ದಾರೆ. ಈ‌ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಬಿಜೆಪಿ ಕಾರ್ಯಕರ್ತರು, ನಾಯಕರು ಗೆದ್ದ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರಿಗೆ ಹೂ ಮಾಲೆ ಹಾಕಿ ಮತ ಎಣಿಕಾ ಕೇಂದ್ರದಿಂದ ನಗರದ‌ ಬ್ರಹ್ಮಗಿರಿ ಮೂಲಕ ಬಿಜೆಪಿ ಕಚೇರಿವರೆಗೆ ತೆರೆದ ಜೀಪಿನಲ್ಲಿ ಮೆರವಣಿಗೆ ನಡೆಸಿದರು. ಈ ವೇಳೆ ಗೆದ್ದ ಖುಷಿಯಲ್ಲಿ ಶೋಭಾ ಕೂಡ ಸ್ಟೆಪ್‌ ಹಾಕಿದರು.

ABOUT THE AUTHOR

...view details