ಬಾಗಲಕೋಟೆಯಲ್ಲಿ ಶಿವರಾತ್ರಿ ಸಂಭ್ರಮ: ಶಿವಸನ್ನಿಧಿಯಲ್ಲಿ ವಿಶೇಷ ಪೂಜೆ-ಪುನಸ್ಕಾರ - ಶಿವರಾತ್ರಿ
ಬಾಗಲಕೋಟೆ: ಶಿವರಾತ್ರಿ ಹಿನ್ನೆಲೆ ಎಂಜಿ ರಸ್ತೆಯಲ್ಲಿರುವ ಶಿವನ ದೇವಸ್ಥಾನದಲ್ಲಿ ಇಂದು ಬೆಳಗ್ಗೆಯಿಂದಲೇ ಭಕ್ತರು ದೇವರ ದರ್ಶನ ಪಡೆಯುತ್ತಿದ್ದಾರೆ. ಶಿವನಿಗೆ ರುದ್ರಾಭಿಷೇಕ, ಹೋಮ ಹವನಗಳು ನಡೆಯುತ್ತಿವೆ. ಅಲ್ಲದೇ ನಗರದ ವಿವಿಧೆಡೆ ಶಿವನ ದೇವಸ್ಥಾನಕ್ಕೆ ತೆರಳಿ ಭಕ್ತರು ಶಿವನ ದರ್ಶನ ಪಡೆಯುತ್ತಿದ್ದಾರೆ. ವಿಶ್ವ ಹಿಂದು ಪರಿಷತ್ ವತಿಯಿಂದ ವಿದ್ಯಾಗಿರಿಯ ಗೌರಿ ಕಲ್ಯಾಣ ಭವನದಲ್ಲಿ ಸಾಮೂಹಿಕ ಇಷ್ಟ ಲಿಂಗ ಪೂಜೆ, ಹೋಮ, ಹವನ ನಡೆಸುವ ಮೂಲಕ ಶಿವರಾತ್ರಿ ಆಚರಣೆ ಮಾಡಿದರು. ಜಾಗರಣೆಗಾಗಿ ಇಂದು ರಾತ್ರಿಯಿಂದ ಬೆಳಗ್ಗಿನ ವರೆಗೆ ವಿವಿಧ ರೀತಿಯ ಮನರಂಜನಾ ಕಾರ್ಯಕ್ರಮಗಳು ಜರುಗಲಿವೆ.